ಗೋಕರ್ಣ, ಸೆ.೨೪: ಸುಮಾರು 8000ದಷ್ಟು ವಿದ್ಯುತ್ ಮೀಟರ ಇರುವ ಈ ಭಾಗದಲ್ಲಿ ವಿದ್ಯತ್ ಬಳಕೆದಾರರಿಗೆ ತಿಂಗಳ ಹಣ ಪಾವತಿಸಲು ಪರದಾಡುವಂತಾಗಿದೆ.

ಇಲ್ಲಿನ ಮೇಲಿನಕೇರಿಯಲ್ಲಿ ಗೊಡಂಗಡಿಕ್ಕಿಂತಲೂ ಚಿಕ್ಕದಾದ ಜಾಗದಲ್ಲಿ ವಿದ್ಯುತ್ ಬಿಲ್ಲ ತುಂಬಿಸಿಕೊಳ್ಳುತ್ತಿದ್ದು ಜನರ ರಸ್ತೆಯಲ್ಲಿ ಕಿ. ಮೀಟರ ಉದ್ದ ಸಾಲಲ್ಲಿ ನಿಲ್ಲುವಂತಾಗಿದೆ. ಬಿಸಿಲು ಅಥವಾ ಮಳೆ ಬಂದರೆ ಪಕ್ಕದ ಅಂಗಡಿ ಬಾಗಿಲಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಬಂದಿದೆ.

ಹಿರಿಯನಾಗರಿಕರು, ಮಹಿಳೆಯರು ಸಾಲಲ್ಲಿ ನಿಲ್ಲಾಗದೆ ಪರದಾಡುವಂತಾಗಿದೆ. ಇನ್ನೂ ದೂರದ ಊರುಗಳಿಂದ ಬಂದು ಹಣ ತುಂಬುವುದೆ ಸಾಹಸವಾಗಿದೆ. ಪ್ರತಿ ದಿನ ಬೆಳಗ್ಗೆ 9ರಿಂದ 12ಘಂಟೆಯವರೆಗೆ ಮಾತ್ರ ಬಿಲ್ ಸ್ವೀಕರಿಸುತ್ತಿದ್ದಾರೆ.

ತಿಂಗಳಿಗೆ ಅಧಿಕ ಆದಾಯ ಬರುವ ಈ ಭಾಗದಲ್ಲಿ ಸರಿಯಾದ ಬಿಲ್ ಸ್ವೀಕರಿಸುವ ಕೇಂದ್ರ ಇಲ್ಲದಿರುವುದು ವಿರ್ಪಯಾಸವಾಗಿದೆ. ಹಣ ಕಟ್ಟದೆ ಇದ್ದಾಗ ಮನೆ ಬಾಗಿಲಿಗೆ ವಸೂಲಿಗೆ ಬರುವ ಹೆಸ್ಕಾಂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವಿದ್ಯುತ್ ಬಿಲ್ ಸ್ವೀಕರಿಸುವ ಕೇಂದ್ರ ಏಕೆ ಇಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ತಿಂಗಳಿಗೆ ಲಕ್ಷಾಂತರ ರೂ ಆದಾಯ ಬರುವ ಭಾಗಕ್ಕೆ ಕನಿಷ್ಟ ಹಣ ಸ್ವೀಕರಿಸುವ ವ್ಯವಸ್ಥೆ ಇಲ್ಲದಿರುವುದು ವಿಷಾದವಾಗಿದೆ. ಇನ್ನಾದರೂ ತಕ್ಷಣ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳ ಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ