ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜೀಬಳದಲ್ಲಿ “ಮನೆ ಮನೆಗೆ ಕಾಂಗ್ರೆಸ್” ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯ್ಕರವರು ಚಾಲನೆ ನೀಡಿದರು‌.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩ರಲ್ಲಿ ಕರ್ನಾಟಕ ಮಹಾ ಜನತೆಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಕರ್ನಾಟಕವನ್ನು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವನ್ನಾಗಿಸಿ ಶೋಷಿತರು,ಅವಕಾಶ ವಂಚಿತರು,ನೊಂದವರಿಗೆ ಧನಿಯಾಗಿ ಸಾಮಾಜಿಕ ನ್ಯಾಯದ ಸೂತ್ರವನ್ನು ಅನುಸರಿಸಿ, ರಾಜ್ಯದ ಜನತೆಗೆ ನೆಮ್ಮದಿಯ ಬಾಳನ್ನು ನೀಡಲು ಶ್ರಮಿಸಿದ ನಮ್ಮ ಸರ್ಕಾರದ ಸಾಧನೆಗಳನ್ನು ನೀವು ಗಮನಿಸಿದ್ದಿರಿ ಮತ್ತು ಬಹುತೇಕ ಜನರು ಅದರ ಫಲಾನುಭವಿಗಳೂ ಆಗಿದ್ದಿರಿ. ಬೆಳೆಸಾಲ ಮನ್ನಾದ ಯೋಜನೆಯಲ್ಲಿ ರೈತನಾದ ನನಗೂ ಸಹ ಉಪಯೋಗ ವಾಗಿದೆ ಎಂದರು.

ನಂತರ ಬೂತ್ ನ ಮನೆಗಳಿಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳ ಕೈಪಿಡಿಗಳನ್ನು ನೀಡಲಾಯಿತು. ಹಾಗೂ ಅವರಿಗೆ ಸರ್ಕಾರದ ಯೋಜನೆಗಳು ತಲುಪಿದೆಯೇ ಎಂಬ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿ.ಎಸ್. ಆರಾಧ್ಯರವರು, ಕೆಪಿಸಿಸಿ ಸದಸ್ಯರು ಹಾಗೂ ಹಿರಿಯರು ಆದ ಶ್ರೀ. ಶಾಂತರಾಮ ಹೆಗಡೆಯವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ದುಭಾಶಿ ಯವರು, ಪಕ್ಷದ ಬೂತ್ ನ ಅಧ್ಯಕ್ಷರಾದ ಮಹೇಶ ನಾಯ್ಕ , ಸದಸ್ಯರಾದ ಜಗದೀಶ್ ನಾಯ್ಕ, ಲೋಕೇಶ್ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ