ಕಾರವಾರ ಸೆ.೨೩ : ಸೇವಾ ನಿಯಮದಲ್ಲಾಗುವ ಅನ್ಯಾಯಗಳು , ಕ್ಷೇತ್ರ ಕಾರ್ಯದಲ್ಲಾಗುವ ತೊಂದರೆಗಳು, ತಂತ್ರಾಂಶ ಹೇರಿಕೆಯಿಂದಾಗುವ ಮಾನಸಿಕ ಮತ್ತು ದೈಹಿಕ ಒಟ್ಟಡ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಇಂದು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ ನೀಡುವದು , ಅನ್ಯ ಇಲಾಖೆಯ ಕೆಲಸಗಳನ್ನು ವಹಿಸದೇ ಇರುವದು, ಸಕಾಲ ರ‌್ಯಾಂಕಿಂಗ್ ವ್ಯವಸ್ಥೆ ರದ್ದುಗೊಳಿಸುವದು , ವೇತನ ಭತ್ಯೆಯನ್ನು ಪರಿಷ್ಕರಿಸುವುದು ಸೇರಿದಂತೆ ಅನೇಕ ಬೇಡಿಕೆಯನ್ನು ಇಡೇರಿಸಲು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಈ ಕೂಡಲೇ ಸರ್ಕಾರ ಬೇಡಿಕೆ ಈಡೇರಿಸದೇ ಇದ್ದಲ್ಲಿ ಅನರ್ದಿಷ್ಠಾವದಿ ಮುಷ್ಕರ ನಡೆಸುವುದಾಗಿ ಸರ್ಕಾರದ ಗಮನಕ್ಕೆ ತಂದು ಆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಸುಬ್ರಮಣ್ಯ ಪಟಗಾರ, ಎ.ವಿ ಪಾಟೀಲ್, ಎಸ್.ಬಿ‌ ಜಾಧವ್, ಯಲ್ಲಮ್ಮ ಪಾಟೀಲ್, ಸುಧಾ ಆಡೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ