ಶ್ರೀ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನವರಾತ್ರಿ ಉತ್ಸವವು ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ, ದೇವತಾ ಪ್ರಾರ್ಥನೆಗಳು ಶ್ರೀ ಶ್ರೀಗಳವರ ಸಮ್ಮುಖದಲ್ಲಿ ಹಾಗೂ ಪುರೋಹಿತರಾದ ಕೃಷ್ಣ ಜೋಶಿ, ಚಿನ್ಮಯ ಜೋಶಿ, ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರೀಗಳು ಇವರ ಉಪಸ್ಥಿತಿಯೊಂದಿಗೆ ಆರಂಭವಾಯಿತು. ಯಜಮಾನರಾಗಿ ಮಂಜುನಾಥ ಮಣಿಗಾರ ದಂಪತಿಗಳು ಪಾಲ್ಗೊಂಡರು.
ಬೆಳಗ್ಗೆ ಶ್ರೀಚಕ್ರಾರ್ಚನೆ, ಶ್ರೀಮದ್ ದೇವೀ ಭಾಗವತ, ಚಂಡೀ ಸಪ್ತಶತೀ, ಋಗ್ವೇದ, ಯಜುರ್ವೇದ, ಸಾಮವೇದ, ಅಧ್ಯಾತ್ಮ ರಾಮಾಯಣ ಪಾರಾಯಣಗಳು, ಮತ್ತು ಶತರುದ್ರಾಭಿಷೇಕ, ಶ್ರೀಸೂಕ್ತ, ಪುರುಷಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತ ಪಾಠಗಳು ಹಾಗೂ ನವಗ್ರಹ, ಬ್ರಹ್ಮಾಸ್ತ್ರ ಜಪಗಳು ನೆರವೇರಿತು.
ನವರಾತ್ರಿ ಪ್ರಯುಕ್ತ ಶ್ರೀ ರಾಮಕ್ಷತ್ರೀಯ ಸಂಘ ಕುಮಟಾ, ವೈಭವ ಇಂಡಸ್ಟ್ರೀಸ್ ಕುಮಟಾ, ಪಲ್ಲವಿ ಕ್ಯಾಸೆಟ್ಸ ಕುಮಟಾ, ಶ್ರೀ ರಾಮಕ್ಷತ್ರೀಯ ಸಂಘ ಯಲ್ಲಾಪುರ ಇವರೆಲ್ಲರೂ ಬಂದು ಸೇವೆಯನ್ನು ಸಲ್ಲಿಸಿದರು.
ಮಧ್ಯಾಹ್ನದಂದು, 12-30 ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. 2-30ರಿಂದ 3-30ರವರೆಗೆ ಶ್ರೀದೇವಿ ಭಾಗವತ ಪುರಾಣ ಪ್ರವಚನ ನಡೆಯಿತು.
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನವು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಾದ ತಾಳಮದ್ದಲೆ “ಶ್ರೀಚಕ್ರಚರಿತ್ರೆ” ಶ್ರೀ ಸದಾನಂದ ಶರ್ಮಾ, ಸಾಗರ ಮತ್ತು ಸಂಗಡಿಗರಿಂದ ನೆರವೇರಿತು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ