ಮಾರಿಕಾಂಬಾ ದೇವಸ್ಥಾನದಲ್ಲಿ ಮತ್ತು ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ವಿಶೇಷ ಪುಷ್ಪಾಲಂಕಾರ
ಮಾರಿಕಾಂಬಾ ದೇವಸ್ಥಾನದಲ್ಲಿ ವಿಜೃಂಣೆಯಿಂದ ಆರಂಭಗೊಂಡ ನವರಾತ್ರಿ ಉತ್ಸವ
ಪುಷ್ಪ ಹಾಗೂ ವಿದ್ಯುತ್ ಅಲಂಕಾರದಿಂದ ಭಕ್ತರನ್ನು ಆಕರ್ಷಿಸುತ್ತಿರುವ ಶ್ರೀ ಮಾರಿಕಾಂಬಾ ದೇವಸ್ಥಾನ.


ಶಿರಸಿ : ಇಂದಿನಿಂದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಸಪ್ತಶತಿ ಪಾರಾಯಣ ಘಟಸ್ಥಾಪನೆಯೊಂದಿಗೆ ವಿಶೇಷ ಪುಷ್ಪಾಲಂಕಾರ ಹಾಗೂ ವಿದ್ಯುತ್ ಅಲಂಕಾರ ಮಾಡಲಾಗಿದ್ದು ಭಕ್ತರನ್ನು ಆಕರ್ಷಿಸುತ್ತಿದೆ. ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದು ಸಾಯಂಕಾಲ ನಂಜನಗೂಡಿನ ಕೀರ್ತನ ಕಲಾ ಚತುರ ಎಮ್. ಸಚಿನ್ ರವರಿಂದ ಕೀರ್ತನೆ ಕಾರ್ಯಕ್ರಮ ನಡೆಯಿತು. ವ್ಯಾಪಕ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಶ್ರೀ ದೇವಿಯ ದರ್ಶನ ಪಡೆಯಲು ಅವಶ್ಯವಿರುವ ಎಲ್ಲಾ ಅನುಕೂಲತೆಯನ್ನು ಮಾಡಲಾಗಿದೆ ಪುಷ್ಪಾಲಂಕಾರ ಸೇವೆ ಸಲ್ಲಿಸ ಬಯಸುವ ಭಕ್ತರು ಮುಂಚಿತವಾಗಿ ದೇಣಿಗೆಯೊಂದಿಗೆ ಹೆಸರು ನೊಂದಾಯಿಸಬೇಕೆಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ವೆಂಕಟೇಶ. ಎಲ್. ನಾಯ್ಕ ತಿಳಿಸಿದ್ದಾರೆ.


ನವರಾತ್ರಿ ಉತ್ಸವದ ನಾಳಿನ ಕಾರ್ಯಕ್ರಮಗಳು
ಇಂದು (ದಿನಾಂಕ: 22-09-2017) ಶುಕ್ರವಾರ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳು
ಬೆಳಿಗ್ಗೆ 6 ಘಂಟೆಯಿಂದ 8 ಘಂಟೆಯವರೆಗೆ ಶ್ರೀ ಮಾರಿಕಾಂಬಾ ಭಜನ ಮಂಡಳಿ ಇವರಿಂದ ಭಜನೆ
8 ಘಂಟೆಯಿಂದ 12 ಘಂಟೆಯವರೆಗೆ ಭಕ್ತಾದಿಗಳಿಂದ ಸಪ್ತಶತಿ ಪಾರಾಯಣ, ಪಲ್ಲವ ಪಾರಾಯಣ
ಬೆಳಿಗ್ಗೆ 9 ರಿಂದ 12 ಘಂಟೆಯವರೆಗೆ ಕರಕುಶಲ ಕಲೆಗಳ ಪ್ರದರ್ಶನ ಸ್ಪರ್ಧೆ
ಸಂಜೆ 3-30 ರಿಂದ 6.00 ಘಂಟೆಯವರೆಗೆ ಹಳ್ಳಿಯ ಹಾಡುಗಳ ಸ್ಪರ್ಧೆ
ಸಂಜೆ 7 ರಿಂದ 9.30 ರ ವರೆಗೆ ಶ್ರೀ ಎಮ್. ಸಚಿನ್, ನಂಜನಗೂಡು ಇವರಿಂದ ಕೀರ್ತನೆ.
ಪುಷ್ಪಲಂಕಾರ ಸೇವೆ ನಡೆಯಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ