ಯಲ್ಲಾಪುರ ಸೆ.೨೦: ಯಲ್ಲಾಪುರದ ತರಕಾರಿ ಮಾರುಕಟ್ಟೆ ಅನೈರ್ಮಲ್ಯದ ಗೂಡಾಗಿದೆ.ದನಗಳ ಹಾಗೂ ಹಂದಿಗಳ ಬೀಡಾಗಿದೆ. ಇಲ್ಲಿ ಶೌಚಾಲಯ ಇದ್ದೂ ಗಬ್ಬೆದ್ದು ನಾರುತ್ತಿದೆ. ಇದರ ಸ್ವಚ್ಚತೆ ಕಾಪಾಡುವ ಹೊಣೆ ಹೊತ್ತಿರುವ “‍‍ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯವರಿಗೆ ಇದರ ಚಿಂತೆಯೇ ಇಲ್ಲ; ಯಾಕೆಂದರೆ ಅವರು ಇರುವ ಸ್ಥಳಕ್ಕೆ ಇಲ್ಲಿ ಏಳುವ ಗಬ್ಬು ವಾಸನೆ ತಟ್ಟುವದಿಲ್ಲ. ಸಾರ್ವಜನಿಕರು, ಆರೋಗ್ಯದ ಬಗ್ಗೆ ಕಾಳಜಿ ಇರುವವರು, ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲಾ ಸೇರಿ ಸ್ವಚ್ಛತೆಯತ್ತ ಗಮನ ಹರಿಸುವ ಜರೂರತ್ತು ನಿಜವಾಗಿಯೂ ಯಲ್ಲಾಪುರಕ್ಕೆ ಅವಶ್ಯವಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ