ಇದೇ ಬರುವ ಅಕ್ಟೋಬರ್ ೭ ಮತ್ತು ೮ ರಂದು ಸೋಂದಾದ ಸ್ವಾದಿ ಜೈನಮಠದಲ್ಲಿ ನಡೆಯಲಿರುವ ನಾಲ್ಕನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸ್ವರ್ಣವಲ್ಲೀ ಮಠ ,ಜೈನಮಠ, ವಾದಿರಾಜಮಠಗಳಲ್ಲಿ ಸೆಪ್ಟೆಂಬರ್ ೧೭ ಭಾನುವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು,ಪೂಜ್ಯ ಜೈನಮಠದ ಶ್ರೀಗಳು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಬಿಡುಗಡೆಯ ಸಮಯದಲ್ಲಿ ಶ್ರೀ ರಾಧಾರಮಣ ಉಪಾಧ್ಯಾಯ, ಮದನ್,ಚಂದ್ರರಾಜ್ ಜೈನ್,ರತ್ನಾಕರ ಹೆಗಡೆ ಬಾಡ್ಲಕೊಪ್ಪ,ಶ್ರೀಪಾದ ಹೆಗಡೆ ಕುಂಬಾರಗುಂಡಿ, ಸುಬ್ರಾಯ ಜೋಷಿ ಸಂಪೇಸರ,ಶ್ರೀಧರ ಗುಡ್ಡೇಮನೆ,ಎನ್ ಎನ್ ಹೆಗಡೆ ವಾಜಗದ್ದೆ,ಎನ್ ಎನ್ ಹೆಗಡೆ ಕಲ್ಗದ್ದೆ ಹೀಗೆ ಜಾಗೃತ ವೇದಿಕೆಯ ಮತ್ತು ಪ್ರಶಸ್ತಿ ಪ್ರದಾನ ಸಮಿತಿಯ ಅನೇಕರು ಉಪಸ್ಥಿತರಿದ್ದರು… ವಿಶೇಷವಾಗಿ ಸಮ್ಮೇಳನದಲ್ಲಿ ಅಪರೂಪವಾಗಿ ಸಂಘಟಿಸಲ್ಪಡುವ ಕರ್ನಾಟಕದ ಸುಮಾರು ಎರಡು ಸಾವಿರ ಪ್ರಾಚೀನ ಸ್ಮಾರಕಗಳ ಛಾಯಾಚಿತ್ರಗಳ ಪ್ರದರ್ಶನವನ್ನ ನಡೆಸಿಕೊಡಲಿರುವ ಶ್ರೀ ಕೆಂಗೇರಿ ಚಕ್ರಪಾಣಿಯವರು,ಡಾ.ಟಿ ಎಸ್ ಗೋಪಾಲರು ಮೈಸೂರಿನ ಬಾಲಸುಬ್ರಹ್ಮಣ್ಯ ಅವರು ಹಾಗೂ ಶಿರಸಿಯ ಸಚಿನ್ ಅವರು ಬಹಳ ಪ್ರೀತಿಯಿಂದ ಆಗಮಿಸಿ ಈ ಸಂದರ್ಭಕ್ಕೆ ಸಾಕ್ಷಿಯಾದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ