ಜಗತ್ತಿನೆಲ್ಲೆಡೆ ಅತ್ಯಧಿಕ ಪ್ರಚಾರದಲ್ಲಿರುವ ಹಾಗೂ ಬಳಕೆಯಲ್ಲಿರುವ ಬಿಟ್ ಕಾಯಿನ್ ಎಂಬ ಡಿಜಿಟಲ ಕರೆನ್ಸಿಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಬಿಟ್ ಕಾಯಿನ್ ಮುದ್ರಿತ ಕರೆನ್ಸಿಯಾಗಿರದೇ ಡಿಜಿಟಲ್ ಸ್ವರೂಪದ ಕರೆನ್ಸಿಯಾಗಿದೆ. ಇದು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕರೆನ್ಸಿಯಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲಿ ತನ್ನದೇ ಆದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಹಂದಬಹುದೇ ಎಂಬ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆಗಳು ನಡೆಯುತ್ತಿದೆ. ಈ ಕರೆನ್ಸಿಗೆ ಲಕ್ಣ್ಮೀ ಎಂಬ ನಾಮಕರಣ ಮಾಡಿ ವಿನೂತನ ವ್ಯವಸ್ಥೆ ಜಾರಿಗೆ ತಂದರೆ ಅದರಿಂದಾಗಬಹುದಾದ ಸಾಧಕ ಬಾಧಕಗಳು ಏನೇನು ಎಂಬಿತ್ಯಾದಿ ವಿಷಯ ಚರ್ಚೆಯಾಗುತ್ತಿದೆ.

ಡಿಜಿಟಲ್ ಕರೆನ್ಸಿಯಿಂದ ಸಾಕಷ್ಟು ಅನುಕೂಲಗಳಿವೆ. ವ್ಯವಹಾರಕ್ಕಾಗಿ ಮುದ್ರಿತ ಹಣ ಹೊಂದಬೇಕಾದ ಅನಿವಾರ್ಯತೆ ಇಲ್ಲದಿರುವುದು, ಬ್ಯಾಂಕಿಂಗ್ ವ್ಯವಸ್ಥೆಯಿಂದಾಗು ಸಮಸ್ಯೆಗಳನ್ನು ಇದು ಪರಿಹರಿಸಲಿದೆ. ಅಲ್ಲದೇ ಯಾರದೇ ಮುಲಾಜಿಲ್ಲದೇ ಸಾರ್ವಜನಿಕರು ಸ್ವಯಂ ಚಾಲಿತಗೊಳಿಸಬಹುದು. ಅಂತರ್ಜಾಲದ ಮುಖಾಂತರ ಎಲ್ಲೆಂದರಲ್ಲಿ ವ್ಯವಸ್ಥಿತವಾಗಿ ವ್ಯವಹರಿಸಬಹುದಾಗಿದ್ದು ಭಾರತೀಯರಿಗೆ ಅತ್ಯಂತ ಅನುಕೂಲ ಒದಗಿಸಲಿದೆ.

ತಂತ್ರಜ್ಞಾನದ ಯುಗದಲ್ಲಿ ಇಂತಹ ಡಿಜಿಟಲೀಕರಣ ವ್ಯವಸ್ಥೆಯ ಅಗತ್ಯತೆಯಿದ್ದು ಇದು ಸಾಕಾರಗೊಂಡಲ್ಲಿ ಭಾರತ ಜಗತ್ತಿನ ದಿಗ್ಗಜ ದೇಶಗಳೊಂದಿಗೆ ಪೈಪೋಟಿಗೆ ಇದು ಅನುಕೂಲಕರವಾಗಲಿದೆ.

– ಅಜಯ ಭಟ್ಟ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ