ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆರವರು ಸನ್ಮಾನ್ಯ ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದರು.
ನೂತನವಾಗಿ ಅಧಿಕಾರವಹಿಸಿಕೊಂಡಿರುವ ಶ್ರೀ ಅನಂತಕುಮಾರ ಹೆಗಡೆರವರನ್ನು ಲೋಕಸಭಾ ಸ್ಪೀಕರ ಶ್ರೀಮತಿ ಸುಮಿತ್ರಾ ಮಹಾಜನರವರು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆ, ರಾಜ್ಯ, ಹಾಗೂ ದೇಶ ಅಭಿವೃದ್ದಿ ಸಾಧಿಸುವಂತೆ ಶುಭ ಹಾರೈಸಿದರು. ಇದರೊಂದಿಗೆ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಮನಸೋಪೂರ್ವಕವಾಗಿ ಶ್ರಮಿಸುವಂತೆ ಕೋರಿದರು.
ಶ್ರೀಮತಿ ಸುಮಿತ್ರಾ ಮಹಾಜನರವರು ನೂತನ ಸಚಿವರನ್ನು ಅಭಿನಂದಿಸಿ ಮುಂದಿನ ನಿಲುವಳಿಗಳ ಬಗ್ಗೆ ಕುಷಲೋಪರಿಯಾಗಿ ಚರ್ಚೆ ನಡೆಸಿದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ