ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು 2016-17 ನೇ ಆರ್ಥಿಕ ವರ್ಷದಲ್ಲಿ ₹1783309/- ರಷ್ಟು ನಿವ್ವಳ ಲಾಭ ಗಳಿಸಿದ್ದು ಸುಮಾರು 15 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿದೆ.ಸದಸ್ಯರ ಪಾಲುಧನದ ಮೇಲೆ ಶೇಕಡಾ 10 ರಷ್ಟು ಲಾಭಾಂಶ ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

ಲಾಭದ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇಕಡಾ 36 ರಷ್ಟು ಹೆಚ್ಚಾಗಿದ್ದು ಒಟ್ಟೂ ಶೇರು ಸದಸ್ಯರ ಸಂಖ್ಯೆ 937ಕ್ಕೇರಿದೆ. ದಿ 20.09.2017 ಬುಧವಾರದಂದು ಮದ್ಯಾಹ್ನ 3.00 ಗಂಟೆಗೆ ಸಂಸ್ಥೆಯ ಆವಾರದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಜೈವಿಕ ಇಂಧನ ಭವಿಷ್ಯದ ಇಂಧನ ಎಂಬ ವಿಷಯದ ಕುರಿತು ಮಾಹಿತಿ ನೀಡಲಾಗುವದು. ಸಂಸ್ಥೆಯ ಎಲ್ಲ ಸದಸ್ಯರು ಹಾಜರಿರಲು ಪ್ರಕಟಣೆಯಲ್ಲಿ ಕೋರಲಾಗಿದೆ.

ವಿ.ಸೂ: ಸಭೆಯ ನಂತರ ಬೆಂಗಳೂರಿನ ಲ್ಯಾಂಡ್ ಸ್ಕೇಪ್ ವಿಜಾರ್ಡ್ ತಂಡದವರು ನಿರ್ಮಿಸಿದ ಅಘನಾಶಿನಿ ನದಿಯ ಕುರಿತಾದ ಅಂತರಾಷ್ಟ್ರೀಯ ಮಟ್ಟದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಮಂಜುನಾಥ ಹೆಗಡೆ (9483613900)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ