ಶಿರಸಿ:

ಪಾದಚಾರಿ ದಂಪತಿಗಳು ಶಿರಸಿ ಕಾಲೇಜು ರಸ್ಥೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ, ವೇಗವಾಗಿ ಬಂದ ಬೈಕ್ ಸವಾರರು ದಂಪತಿಗಳಿಗೆ ಗುದ್ದಿದರು. ಈ ಅಪಘಾತದಲ್ಲಿ ಮಹಿಳೆಯೋರ್ವಳಿಗೆ ಪೆಟ್ಟಾಗಿದ್ದು ಸಾರ್ವಜನಿಕರು ತಕ್ಷಣ ಆಸ್ಪತ್ರೆ ದಾಖಲಿಸಿದರು.

ಬೈಕ್ ಸವಾರರು ವೇಗವಾಗಿ ವಾಹನ ಚಲಾಯಿಸಿ, ಪಾದಚಾರಿ ಹಾಗೂ ಇತರ ಸವಾರರಿಗೆ ತೊಂದರೆಯಾಗುವಂತಹ ಘಟನೆಗಳು ಶಿರಸಿ ಕಾಲೇಜು ರಸ್ಥೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬೆನ್ನಲ್ಲೆ, ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

೧೫ ರಿಂದ ೨೦ ಜನ ಯುವಕರ ವಾಹನ ಮಿತಿಮೀರಿ ಚಲಾಯಿಸಿ, ಮಹಿಳೆಯೋರ್ವರಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಉಪಸ್ಥಿತರಿದ್ದ ಕೃಷ್ಣ ಎಸಳೆ, ರಾಜೇಶ ಶೆಟ್ಟಿ, ಸುರೇಶ ಶೆಟ್ಟಿ, ಮುನಾಫ ಲಂಡಕನಹಳ್ಳಿ ಹಾಗೂ ಇತರ ಸಾರ್ವಜನಿಕರು ಬುದ್ದಿವಾದ ಹೇಳಲು ಮುಂದಾದರು.

ಸಾರ್ವಜನಿಕರ ಮಾತಿಗೆ ಎದುರುತ್ತರ ನೀಡುತ್ತ ತಾವು ವಾಹನ ಚಲಾಯಿಸಿದ್ದು ಸರಿಯಾಗಿಯೇ ಇದೆ ಎಂಬ ಉದ್ದಟತನ ಹಾಗೂ ಪಾನಮತ್ತ ಸ್ಥಿತಿ ಸಾರ್ವಜನಿಕರನ್ನು ಕೆರಳಿಸಿತು. ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ಧರ್ಮದೇಟು ನೀಡುವ ಮೂಲಕ ಯುವಕರ ತಪ್ಪನ್ನು ಮನಗಾಣಿಸಿದರು.

ಇತ್ತೀಚಿನ ದಿನಗಳಲ್ಲಿ ಅತೀ ವೇಗದ ವಾಹನ ಚಲಾವಣೆ ನಗರ ಹಾಗೂ ಕಾಲೇಜು ರಸ್ಥೆಯಲ್ಲಿ ಮಿತಿ ಮೀರುತ್ತಿದ್ದು, ಪೋಲಿಸರನ್ನು ಲೆಕ್ಕಿಸದಷ್ಟು ಬೆಳೆದಿದೆ.

ಇದೇ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಕೃಷ್ಣ ಎಸಳೆ, ರಾಜೇಶ ಶೆಟ್ಟಿ, ಸುರೇಶ ಶೆಟ್ಟಿ, ಮುನಾಫ ಲಂಡಕನಹಳ್ಳಿ, ಚಂದ್ರಶೇಖರ ಶಿರ್ಸಿಕರ ಹಾಗೂ ಇತರ ಸಾರ್ವಜನಿಕರು ಯುವಕರ ಇಂಥ ಉತ್ಪಾತತೆ ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಯೋಗ್ಯವಾಗಿ ಬುದ್ದಿಕಲಿಸಲಾಗುವುದು ಎಂದಿದ್ದಾರೆ.

News: Sirsi.Info

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ