ಕಾರವಾರ: ಕಳೆದ ಸುಮಾರು ಮೂರು ವರ್ಷಕ್ಕೆ ಸಮೀಪ ಸ್ವಚ್ಚತೆಯನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪಹರೆ ವೇದಿಕೆ ಈ ವರ್ಷದ ಮಳೆಗಾಲದಲ್ಲಿ ದೇವಾಲಯಗಳ ಆವರಣವನ್ನ ಸ್ವಚ್ಚಗೊಳಿಸಿ ಭಕ್ತಾದಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ..

ಪ್ರತಿ ಶನಿವಾರ ಮುಂಜಾನೆಯಲ್ಲಿ ಕಾರವಾರದ ನೂರಾರು ಕಾರ್ಯಕರ್ತರ ಸಹಯೋಗದೊಂದಿಗೆ ಪಹರೆಯ ಈ ಅಭಿಯಾನ ನಿರಂತರವಾಗಿ ಮುನ್ನಡೆಯುತ್ತಿದೆ.
ಕಳೆದ ವಾರ ನಗರದ ಬಾಡದಲ್ಲಿರುವ ಪ್ರಸಿದ್ದ ಮಹಾದೇವಸ್ಥಾನದಲ್ಲಿ ಸ್ವಚ್ಚತೆಯನ್ನ ಪಹರೆ ವೇದಿಕೆ ನಡೆಸಿತು. ಕಳೆದ ಅನೇಕ ಬಾರಿ ಈ ರೀತಿಯ ಸ್ವಚ್ಚತೆಯನ್ನ ಮಹಾ ದೇವಸ್ಥಾನದಲ್ಲಿ ನಡೆಸಿದ್ದು ಇದೆ‌. 


ಪಹರೆಯ ಈ ಸೇವಾ ಮನೋಭಾವ ಪ್ರಶಂಸಿದ ಮಹಾ ದೇವಸ್ಥಾನ ಆಡಳಿತ ಕಮಿಟಿ ನಿರಂತರವಾಗಿ ಈ ರೀತಿ ಒಂದು ಉತ್ತಮ ಕಾರ್ಯ ನಡೆಸಿಕೊಂಡು ಬರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದರು. ಈ ಸಂದರ್ಭದಲ್ಲಿ ಪಹರೆ ವೇದಿಕೆಗೆ ದೇವಸ್ಥಾನದ ವತಿಯಿಂದ ಗೌರವಿಸಲೇ ಬೇಕೆಂದು ಮುಂದಾದಾಗ ಸಮಸ್ತ ಪಹರೆ ವೇದಿಕೆಯ ಪರವಾಗಿ ಹಿರಿಯ ಸದಸ್ಯ ಶ್ರೀ ಕಸ್ತೂರಿ ಪೈ ರವರಿಗೆ ಶಾಲು ಹೊದಿಸಿ ಫಲಪುಷ್ಬ ನೀಡಿ ಸನ್ಮಾನಿಸಲಾಯಿತು..
ಈ ವಾರ ಬಾಡದ ಗುರು ಮಠದಲ್ಲಿ ಸಹ ಪಹರೆ ಕಾರ್ಯಕರ್ತರು ಮಠದ ಭಕ್ತರ ಜೊತೆ ಕೂಡಿ ಸ್ವಚ್ಚತಾ ಕಾರ್ಯ ಮಠದ ಆವರಣದಲ್ಲಿ ನಡೆಸಿದರು.
ದೇವಸ್ಥಾನದ ಸುತ್ತಮುತ್ತ ಬಿದ್ದಿದ್ದ ಕಸವನ್ನ ತೆಗೆದು  ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಗುರುಗಳ ಸೇವೆ ಮಾಡಿದರು. ಮುಂದಿನ ವಾರ ಸಹ ಗುರು ಮಠ ಆವರಣದಲ್ಲಿ 135 ನೇ ವಾರದ ಸ್ವಚ್ಚತಾ ಅಭಿಯಾನ ನಡೆಸಲು ಪಹರೆ ವೇದಿಕೆ ಕಾರ್ಯಕರ್ತರು ನಿರ್ಧರಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ.
– ನಾಗರಾಜ ನಾಯಕ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ