ಶಿರಸಿಯ  ಯುವ ಧುರೀಣ ಹಾಗೂ ಉದ್ಯಮಿ ಶ್ರೀರಾಮ್ ಭಟ್  ಅವರನ್ನು ಯುವ ಜನತಾದಳ ” ರಾಜ್ಯ ಕಾರ್ಯದರ್ಶಿ ” ಯಾಗಿ  ನೇಮಕ ಮಾಡಲಾಗಿದೆ . ಯುವ ಜನತಾದಳದ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ್ ಅವರ ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು. 

ಶಿರಸಿ ಸಮೀಪದ ಬೆಂಡೆಗದ್ದೆಯವರಾದ ಶ್ರೀರಾಮ್ ಭಟ್ ಯುವ ಉದ್ಯಮಿಯಾಗಿ , ಸ್ವರ್ಣವಲ್ಲಿ ಯುವ ಪರಿಷತ್ , ಅಖಿಲ ಹವ್ಯಕ ಮಹಾಸಭಾ ಮತ್ತಿತರ ಸಾಮಾಜಿಕ ಸಂಸ್ಥೆಗಳ ಪದಾಧಿಕಾರಿಯಾಗಿ  ಸಕ್ರಿಯರಾಗಿದ್ದಾರೆ . ಕಳೆದ ನಾಲ್ಕೈದು ವರ್ಷಗಳಿಂದ ಜನತಾದಳದ ಸಕ್ರಿಯ ಸದಸ್ಯರಾಗಿರುವ ಇವರು ಯುವ ಧುರೀಣ ಡಾ. ಶಶಿಭೂಷಣ ಹೆಗಡೆ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ .

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ