ಜಪಾನ್‌ ಟೊಕಿಯೊದ ಕಸುಮೆಗಸೆಕಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನಿನ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ‘ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು
ಕಾರವಾರ: ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಡಾ.ಶ್ರೀಹರಿ ಚಂದ್ರಘಾಟಗಿ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ‘ಪರಿಸರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಪರಿಸರ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿರುವುದಕ್ಕೆ ಈ ಪ್ರಶಸ್ತಿ ನೀಡಲಾಗಿದ್ದು, ಆ ಮೂಲಕ ಜಪಾನ್ ಸಚಿವಾಲಯದ ಪರಿಸರ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ವಿದೇಶಿ ಪ್ರಜೆ ಎಂದೆನಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಡಾ.ಶ್ರೀಹರಿ ಅವರು ಪರಿಸರ ಸಂಕ್ಷಣೆಗೆ ಸುಲಭ, ದುಬಾರಿಯಲ್ಲದ ಹಾಗೂ ಪರಿಣಾಮಕಾರಿ ಪರ್ಯಾಯ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಪೇಟೆಂಟ್ ಹೊಂದಿರುವ ಈ ತಂತ್ರಜ್ಞಾನವನ್ನು ಜಪಾನ್, ತೈವಾನ್, ಥೈಲೆಂಡ್, ಭಾರತ, ಚೀನಾ ಹಾಗೂ ಅಮೆರಿಕದಲ್ಲಿ ಅಳವಡಿಸಲಾಗಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ