ಮಡಿಕೇರಿ: ಪಾಕಿಸ್ತಾನದ ಪರವಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.

ಏಳನೇ ಹೊಸಕೋಟೆಯ ಸಮ್ಮದ್ ಮುನೀರ್, ಜಹೀರ್ ಹಾಗೂ ರಿಯಾಝ್ ಎಂಬವರು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತವನ್ನು ಮಣಿಸಿದ ಸಂದರ್ಭ ಪಾಕ್ ಧ್ವಜ ಪ್ರದರ್ಶಿಸಿದ್ದಲ್ಲದೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಆರೋಪ ಹೊತ್ತಿದ್ದರು.
ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಗುರುವಾರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಶಿವಾನಂದ ಲಕ್ಷ್ಮಣ ಹಂಚಿ ತಿರಸ್ಕರಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 295ಎ ಪ್ರಕಾರ ಯಾವುದೇ ವರ್ಗದ ಮತವನ್ನು ಅಥವಾ ಮತೀಯ ನಂಬಿಕೆಗಳನ್ನು ದ್ವೇಷ ಭಾವನೆಯಿಂದ ಅಪಮಾನಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ 3 ವರ್ಷ ಸಜೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕೋರ್ಟ್ ಹೇಳಿದೆ.
ಕೃಪೆ: ವಾಟ್ಸಪ್

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ