ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆ, ಹುಳಗೋಳದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಶ್ರೀಮತಿ ರಾಜೇಶ್ವರಿ ಹೆಗಡೆಯವರ ಮನೆಯಲ್ಲಿ 19-06-2017ರ ಸೋಮವಾರದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಅಂಚೆ, ಹುಳಗೋಳದ ಶ್ರೀ ದತ್ತಕೃಪಾ ನಿಲಯಕ್ಕೆ ಗೌಡರು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು ಸಾಯಂಕಾಲದವರೆಗೂ ವಿಚಾರವಂತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕತೆ, ಗ್ರಾಮೀಣ ಪ್ರದೇಶಗಳ ಸಮಸ್ಯೆ, ರೈತರ ಸಾಲಮನ್ನಾ ಸಾಧಕ ಬಾಧಕತೆ ವಿಷಯಗಳು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಕರ್ನಾಟಕ ವಿಧಾನ ಪರಿಷತ್‍ನ ಮಾನ್ಯ ಉಪ ಸಭಾಪತಿಗಳಾದ ಮರಿತಿಬ್ಬೇಗೌಡರು, ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ.ಎಸ್.ವಿ.ದತ್ತ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು. ಸಂವಾದ ಕಾರ್ಯಕ್ರಮದ ನಂತರ ಮಧ್ಯಾಹ್ನ 3 ಘಂಟೆಯಿಂದ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಹಾಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆಯ ಅಧ್ಯಕ್ಷರಾಗಿರುವ ರಾಜೇಶ್ವರಿ ರಾಮಚಂದ್ರ ಹೆಗಡೆ ಹಾಗೂ ಉಪಾಧ್ಯಕ್ಷರಾಗಿರುವ ರಾಮಚಂದ್ರ ವಿ. ಹೆಗಡೆಯವರು ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ