ಹೊನ್ನಾವರ: ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ತಾಲೂಕಿನ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಆಪ್ತ ಸಮಾಲೋಚನೆ ಮತ್ತು ಉದ್ಯೋಗ ಮೇಳವನ್ನು ಜೂನ್ 20 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಈ ಯೋಜನೆಯಲ್ಲಿ ಆಟೋಮೊಬೈಲ್, ಬ್ಯಾಂಕಿಂಗ್/ವಿಮೆ, ಕೆಮಿಕಲ್ಸ ಮತ್ತು ಪ್ಯಾರಾಮೆಡಿಕಲ್ಸ, ಎಲೆಕ್ಟ್ರಾನಿಕ್ಸ, ಹಾರ್ಡವೇರ್, ಆರೋಗ್ಯ ಸೇವೆಗಳು, ಬಿಪಿಓ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಉದ್ಯೋಗ ಮೇಳದಲ್ಲಿ ಸರಕಾರದಿಂದ ಗುರುತಿಸಿದ ಸಂಸ್ಥೆಗಳು ಹಾಜರಿದ್ದು ಆಪ್ತ ಸಮಾಲೋಚನೆಯ ಮೂಲಕ ಮಾಹಿತಿ ಒದಗಿಸಲಿವೆ. ಇದರ ಪ್ರಯೋಜನವನ್ನು ತಾಲೂಕಿನ ಯುವಜನತೆ ಪಡೆದುಕೊಳ್ಳಬೇಕೆಂದು ಹೊನ್ನಾವರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ