Ajay Bhat
Ajay Bhat

ತಂತ್ರಜ್ಞಾನದ ವೇಗ ದಿನದಿಂದ ದಿನಕ್ಕೆ ಇಮ್ಮುಡಿಗೊಳ್ಳುತ್ತಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಸಮರ್ಪಕ ಬಳಕೆ ಹತ್ತು ಹಲವು ಲಾಭಗಳನ್ನು ಒದಗಿಸುತ್ತದೆ. ಕುಳಿತಲ್ಲಿಯೇ ಜಗತ್ತನ್ನು ವೀಕ್ಷಿಸುವ, ವ್ಯವಹರಿಸುವ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ದೇಶಕ್ಕೆ ಹಾಗೂ ದೇಶದ ಜನರಿಗೆ ಅತ್ಯನುಕೂಲ ಒದಗಿಸುವುದಲ್ಲದೇ, ಭಾರತದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಕಾರಣವಾಗಲಿದೆ. ತಂತ್ರಜ್ಞಾನವನ್ನು ಅತ್ಯಾಧುನಿಕಗೊಳಿಸಿ ಸಮರ್ಪಕ ಬಳಕೆಯ ಅಗತ್ಯ ಭಾರತಕ್ಕೆ ಇದೆ. ಸ್ಪರ್ಧಾತ್ಮಕವಾಗಿ ಜೀವನಮಟ್ಟವನ್ನು ಸುಧಾರಿಸುವ ಒಂದು ಪ್ರಯತ್ನದ ಒಂದು ಭಾಗವೇ ನ್ಯಾವಿಗೇಶನ್ ಸಿಸ್ಟಮ್.

ಏನಿದು ನ್ಯಾವಿಗೇಶನ್ ಸಿಸ್ಟಮ್?
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಬೇಳೆಸುವಾಗ ಅಪರಿಚ ಸ್ಥಳದ ಸಂಪೂರ್ಣ ಮಾಹಿತಿ ದೊರಕಿಸಿ, ಆರಂಭಿಕ ಸ್ಥಳದಿಂದ ಪ್ರಯಾಣದ ಕೊನೆಯ ಸ್ಥಳವನ್ನು ಮೊಬೈಲ್ ಹಾಗೂ ಕಂಪ್ಯುಟರಿನಲ್ಲಿ ವೀಕ್ಷಿಸಬಹುದಾದ ವ್ಯವಸ್ಥೆಯೇ ನ್ಯಾವಿಗೇಶನ್ ಸಿಸ್ಟಮ್.

ಸರಳವಾಗಿ ಉದಾಹರಿಸಿ ಹೇಳಬೇಕೆಂದರೆ, ಶಿರಸಿಯಿಂದ ಬೆಂಗಳೂರಿನ ಮಲ್ಲೇಶ್ವರಂ ಗೆ ತಮ್ಮ ಸ್ವಂತವಾಹನದ ಮೂಲಕ ತೆರಳಬೇಕು ಎಂದಾದಲ್ಲಿ ಈ‌ ನ್ಯಾವಿಗೇಶನ್ ಮಾರ್ಗದರ್ಶನ ಮಾಡಲಿದೆ. ಅತೀ ಪ್ರಚಲಿತದಲ್ಲಿರುವ ಗೂಗಲ್ ಮ್ಯಾಪ್ ಬಳಸಿ ಸಧ್ಯ ಸಾಕಷ್ಟು ಜನರು ಈ ಸೌಲಭ್ಯ ಪಡೆಯುತ್ತಲಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತನ್ನ ಸ್ವಂತ ನ್ಯಾವಿಗೇಶನ್ ಹೊಂದಲಿದ್ದು, ಗೂಗಲ್ ಅಥವಾ ಇನ್ನಿತರ ವಿದೇಶಿ ತಂತ್ರಜ್ನಾನ ಬಳಕೆಯ ಮೊರೆಹೋಗುವ ಅಗತ್ಯವಿರುವದಿಲ್ಲ.

ಸ್ವದೇಶಿ ನಿರ್ಮಿತ ನಾವಿಕ್
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿಲಿನಿಂದ ಸ್ವದೇಶಿ ಉತ್ಪನ್ನಕ್ಕೆ ಹೆಚ್ಚಿನ‌ಮಹತ್ವ ನೀಡಿದೆ. ಇದರ ಒಂದು ಭಾಗವೇ ನಾವಿಕ್. ನಾವಿಕ್ ಪರಿಪೂರ್ಣ ಭಾರತದಲ್ಲಿಯೇ ನಿರ್ಮಾಣಗೊಂಡ ನ್ಯಾವಿಗೇಶನ್ ಸಿಸ್ಟಂ. ಐ.ಆರ್.ಎನ್.ಎಸ್.ಎಸ್-೧ಜಿ ಮೂಲಕ ಯಶಸ್ವಿಯಾಗಿ ಉಡಾಯಿಸಲಾದ ಏಳು ಉಪಗ್ರಹಗಳನ್ನು ಹಂತಹಂತವಾಗಿ ಬಾಹ್ಯಾಕಾಶ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಈ ಯೋಜನೆ ೨೦೧೮ ರಿಂದ ಸಾರ್ವಜನಿಕ ಬಳಕೆಗೆ ಲಭ್ಯವಿದ್ದು ಜನರು ಅತೀ ಸರಳವಾಗಿ ಬಳಸಬಹುದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾವಿಕ್ ಎಂದು ನಾಮಕರಣಮಾಡಿದ್ದಾರೆ.

ನಾವಿಕ್ ನ ಅಗತ್ಯವೇನಿತ್ತು?
ಭಾರತ ಸರ್ಕಾರ ಇಲ್ಲಿಯವರೆಗೆ ಅಮೇರಿಕದ ಜಿಪಿಎಸ್ ನ್ನು ವ್ಯಾಪಕವಾಗಿ ಬಳಸುತ್ತಿತ್ತು, ಹಾಗೂ ಸಾರ್ವಜನಿಕರು ಗೂಗಲ್ ಮ್ಯಾಪ್ ಹಾಗೂ ಅದರ ನ್ಯಾವಿಗೇಶನ್ನ ಅನ್ನು ವ್ಯಾಪಕವಾಗಿ ಬಳಸುತ್ತಿದ್ದರು ಆದಾಗ್ಯೂ ನಾವಿಕ್ ಬಳಕೆಯ ಅಗತ್ಯವೇನು? ಎಂಬ ಪ್ರಶ್ನೆ ಏಳುವುದು ಸಹಜ ಕೂಡ.

ವಿದೇಶಿ ವ್ಯವಸ್ಥೆ ಬಳಸುವಾಗ ಅವರ ಭಾರತಕ್ಕೇಕೆ ಬೇಕು ತನ್ನದೇ ಆದ ನ್ಯಾವಿಗೇಶನ್ ಸಿಸ್ಟಂ?

ತಂತ್ರಜ್ಞಾನದ ವೇಗ ದಿನದಿಂದ ದಿನಕ್ಕೆ ಇಮ್ಮುಡಿಗೊಳ್ಳುತ್ತಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ತಂತ್ರಜ್ಞಾನ ಸಮರ್ಪಕ ಬಳಕೆ ಹತ್ತು ಹಲವು ಲಾಭಗಳನ್ನು ಒದಗಿಸುತ್ತದೆ. ಕುಳಿತಲ್ಲಿಯೇ ಜಗತ್ತನ್ನು ವೀಕ್ಷಿಸುವ, ವ್ಯವಹರಿಸುವ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ದೇಶಕ್ಕೆ ಹಾಗೂ ದೇಶದ ಜನರಿಗೆ ಅತ್ಯನುಕೂಲ ಒದಗಿಸುವುದಲ್ಲದೇ, ಭಾರತದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಕಾರಣವಾಗಲಿದೆ. ತಂತ್ರಜ್ಞಾನವನ್ನು ಅತ್ಯಾಧುನಿಕಗೊಳಿಸಿ ಸಮರ್ಪಕ ಬಳಕೆಯ ಅಗತ್ಯ ಭಾರತಕ್ಕೆ ಇದೆ. ಸ್ಪರ್ಧಾತ್ಮಕವಾಗಿ ಜೀವನಮಟ್ಟವನ್ನು ಸುಧಾರಿಸುವ ಒಂದು ಪ್ರಯತ್ನದ ಒಂದು ಭಾಗವೇ ನ್ಯಾವಿಗೇಶನ್ ಸಿಸ್ಟಮ್.

ನಾವಿಕ್ ಸಂಪೂರ್ಣವಾಗಿ ಭಾರತದಲ್ಲಿಯೇ ಸಿದ್ದಪಡಿಸಿದಂತಹ ವ್ಯವಸ್ಥೆ. ಮುಂದಿನ ದಿನಗಳಲ್ಲಿ ನಾವು ಬಾಹ್ಯ ಜಗತ್ತನ್ನು ಅವಲಂಬಿಸಬೇಕಿಲ್ಲ. ಭಾರತ ಸ್ವಂತ ನ್ಯಾವಿಗೇಶನ್ ಹೊಂದಲು ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ವಿವರಿಸಬಹುದು.

ಸುರಕ್ಷತೆ ಪ್ರಮುಖ ಕಾರಣ

ಈಗ ಬಳಸುತ್ತಿರುವ ನ್ಯಾವಿಗೇಶನ್ ಇತರ ದೇಶಗಳ ಅಡಿಯಲ್ಲಿ ಬಳಸಲ್ಪಡುವದರಿಂದ ಭಾರತದ ಸೂಕ್ಷ್ಮ ಪ್ರದೇಶಗಳ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅದೆಷ್ಟೋ ಸ್ಥಳಗಳು ಶತ್ರು ದೇಶಗಳ ಸಂಪರ್ಕದಿಂದ ದೂರವಿರಬೇಕಾದು ಅತ್ಯಂತ ಅಗತ್ಯವಾದ ಕಾರಣದಿಂದ ಇದನ್ನು ಬಳಸುವುದು ಒಂದರ್ಥದಲ್ಲಿ ಅಪಾಯಕ್ಕೆ ಎಡೆಮಾಡಿಕೊಟ್ಟಂತೆ.

ಗೂಗಲ್ ನ್ಯಾವಿಗೇಶನ್ ಕೂಡ ನಾವು ಪ್ರಯಾಣಿಸುವ ಪ್ರತೀ ಸ್ಥಳವನ್ನು ಶೇಕರಿಸಿಟ್ಟುಕೊಳ್ಳುತ್ತದೆ. ಇದು ಅಮೆರಿಕ ಗೂಢಚರ್ಯೆಗೆ ಅನುಕೂಲ ಒದಗಿಸುತ್ತದೆ ಎಂಬ ವಾದವೂ ಇದೆ.

ಅವಲಂಬನೆಯಿಂದ ಮುಕ್ತಿ

ಅಮೇರಿಕದ ಜಿ.ಪಿ.ಎಸ್. ವ್ಯವಸ್ಥೆಯನ್ನು ಬಳಸುತ್ತಿರುವ ಭಾರತ ಕಾರ್ಗಿಲ್ ಕದನದ ಸಂದರ್ಭದಲ್ಲಿ ಜಿ.ಪಿ.ಎಸ್. ಬಳಸಲು ಕೋರಿತ್ತು, ಆದರೆ ಅಮೆರಿಕ ಇದಕ್ಕೆ ಅನುಮತಿ ನೀಡದೆ ಭಾರತದ ಸೇನೆ ಹಲವು ಸಮಸ್ಯೆ ಎದುರಿಸುವಂತಾಗಿತ್ತು. ಇದಕ್ಕೆ ಕಾರಣವಿಷ್ಟೇ ನಮ್ಮ ಸ್ವಂತದಲ್ಲದ ಜಿ.ಪಿ.ಎಸ್. ಇತರರ ಅಣತಿಗೆ ತಲೆಯೊಡ್ಡಬೇಕಾದುದಾಗಿದೆ.

ಸಂಪೂರ್ಣ ಸ್ವಾಮ್ಯ ಹೊಂದಬಹುದಾದ ನಾವಿಕ್ ಭಾರತದ ನಿಯಂತ್ರಣದಲ್ಲಿರಲಿದೆ. ಇದು ಇತರ ದೇಶಗಳ ಅವಲಂಬನೆಯನ್ನು ತಪ್ಪಿಸಲಿದೆ. ಒಂದರ್ಥದಲ್ಲಿ ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ಭಾರತ ಸರ್ವತಂತ್ರ ಸ್ವತಂತ್ರವಾಗಲಿದೆ. ಇದು ಭಾರತದ ಶಕ್ತಿಯನ್ನು ಇಮ್ಮುಡಿಗೊಳಿಸಲಿದೆ.

ಭಾರತೀಯರಿಗೆ ಅತ್ಯಂತ ಅನುಕೂಲವಾಗಲಿದೆ. ನಿರ್ಭೀತಿಯಿಂದ ನಾವಿಕ್ ಬಳಸಬಹುದು. ಅತ್ಯಂತ ನಿಖರ ಮಾಹಿತಿ ಪಡೆಯಬಹುದು. ಇತ್ತೀಚಿನ ತಂತ್ರಜ್ಞಾನದಿಂದಾಗಿ ಇನ್ನೂ ಉತ್ತಮ ನ್ಯಾವಿಗೇಶನ್ ಪಡೆದು ಸ್ಥಳ ಪರಿಚಯ ಒಡೆಯಬಹುದಾಗಿದೆ.

ಕೊನೆಯಮಾತು

ಹಂತಹಂತವಾಗಿ ಭಾರತ ಸ್ವದೇಶಿ ಉತ್ಪನ್ನ ಬಳಕೆಯಿಂದಾಗಿ ಜಾಗತಿಕ ಅವಲಂಬನೆ ಕಡಿಮೆಯಾಗಲಿದೆ. ಉತ್ತಮ ಹಾಗೂ ವ್ಯವಸ್ಥಿತ ಯೋಜನೆಗಳು ಜನಸಾಮಾನ್ಯರ ಅಭಿವೃದ್ದಿಗೆ ಕಾರಣವಾಗಲಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ