ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ(ಉ.ಕ.).

ಜಯಂತಿ ಉತ್ಸವದ ಕರೆಯೋಲೆ

ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನಾ ಅಂಗವಾಗಿ ನಡೆಯುವ ಜಯಂತಿ ಉತ್ಸವವು

ಶ್ರೀ ಶಾಲಿವಾಹನ ಗತಶಕೆ ೧೯೩೭ ನೇ ಮನ್ಮಥನಾಮ ಸಂವತ್ಸರದ ವೈಶಾಖ ಶುಧ್ದ ಅಷ್ಟಮಿ ರವಿವಾರ

ದಿನಾಂಕ : ೨೬-೦೪-೨೦೧೫ ರಂದು ನಡೆಯಲಿದ್ದು, ಶ್ರೀ ದೇವಿಯ ಪ್ರೀತ್ಯರ್ಥವಾಗಿ ಶ್ರೀ ದೇವಸ್ಥಾನದಲ್ಲಿ

ಕಲಾವೃಧ್ದಿ ಹವನ ಮತ್ತು ಶತಚಂಡೀ ಹವ ನಡೆಯುವುದು.

—————————————————–

ದಿನಾಂಕ: ೨೪-೦೪-೨೦೧೫ ಶುಕ್ರವಾರ ಬೆಳಿಗ್ಗೆ ೯-೦೦ ಕ್ಕೆ ಸಾಮೂಹಿಕ ಪ್ರಾರ್ಥನೆ, ಪ್ರಧಾನ ಸಂಕಲ್ಪ,

ಗಣೇಶಪೂಜಾ, ಋತ್ವಿಗ್ವರ್ಣಿ, ಶತಚಂಡೀಯಾಗದ ಪಾರಾಯಣ ಆರಂಭ.

———————————————————–

ದಿನಾಂಕ: ೨೫-೦೪-೨೦೧೫ ಶನಿವಾರ ಕಲಾವೃಧ್ದಿಹವನದ ಪೂರ್ಣಾಹುತಿಯು

ಮಧ್ಯಾಹ್ನ ೧೨-೧೫ ಘಂಟೆಗೆ ನಡೆಯುವುದು.

————————————————————-

ಹಾಗೂ

ದಿನಾಂಕ: ೨೬-೦೪-೨೦೧೫ ರವಿವಾರ ಶತಚಂಡೀ ಹವನದ ಪೂರ್ಣಾಹುತಿಯು

ಮಧ್ಯಾಹ್ನ ೧೨-೧೫ ಘಂಟೆಗೆ ನಡೆಯುವುದು.

————————————————-

ಹಾಗೂ ಸಾಯಂಕಾಲ ೪-೦೦ ಘಂಟೆಗೆ ಶ್ರೀ ದೇವಿಯ ಪಲ್ಲಕ್ಕಿಯು ಶ್ರೀ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ದೇವಾಲಯಕ್ಕೆ ಬಂದು ಮಹಾಮಂಗಳಾರತಿಯಾಗುವುದು.

ಅದೇದಿನ ಸಂಜೆ ೭-೦೦ ಘಂಟೆಯಿಂದ ರಾತ್ರಿ ೮-೩೦ ಘಂಟೆಯವರೆಗೆ ಶ್ರೀ ದೇವಸ್ಥಾನದ ಸಭಾ ಮಂಟಪದಲ್ಲಿ

ವೇ||ಮೂ|| ಶ್ರೀ ಶ್ರೀಕಾಂತ ಭಟ್ಟ,ಕೆರೇಕೈ , ಶಿರಸಿ ಇವರಿಂದ

ಪ್ರವಚನ ಕಾರ್ಯಕ್ರ ಏರ್ಪಡಿಸಲಾಗಿದೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಕಾರಣ ಸಕಲ ಭಕ್ತಾದಿಗಳು ಶ್ರೀ ದೇವಸ್ಥಾನಕ್ಕೆ ಬಂದು ಉತ್ಸವದಲ್ಲಿ ಭಾಗವಹಿಸಿ,

ಪ್ರಸಾದ ಸ್ವೀಕರಿಸಿ , ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ವಿ.ಸೂ : ಭಕ್ತಾದಿಗಳು ರೂ. ೧೧೦-೦೦ ಕಾಣಿಕೆಯನ್ನು ಸಲ್ಲಿಸಿ ರಶೀದಿ ಪಡೆದಲ್ಲಿ ಪೂರ್ಣಾಹುತಿಯ ವೇಳೆಗೆ ಅವರ ಹೆಸರಿನಲ್ಲಿ ವೈದಿಕರಿಂದ ಸಂಕಲ್ಪ ಮಾಡಿಸಿ, ಹವನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಬೇಕಾಗುವ ಉಡಿ-ಕಾಯಿ ವಗೈರೆ ಶ್ರೀ ದೇವಸ್ಥಾನದಿಂದ ಪೂರೈಸಲಾಗುವುದು. ಆಸಕ್ತಿಯುಳ್ಳವರು ಮುಂಚಿತವಾಗಿ ಹೆಸರನ್ನು ನೋಂದಾಯಿಸಬಹುದು.

*********************************************************************************************

ಅಧ್ಯಕ್ಷರು,

ಹಾಗೂ ಧರ್ಮದರ್ಶಿ ಮಂಡಳಿ,

ಶ್ರೀ ಮಾರಿಕಾಂಬಾ ದೇವಸ್ಥಾನದ ಬಾಬುದಾರರು, ಅರ್ಚಕರು ,ಹಾಗೂ ಸಿಬ್ಬಂದಿ ವರ್ಗದವರು,

ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ(ಉ.ಕ.).

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ