ಮರದ ತುಂಬೆಲ್ಲ ಹಲಸಿನ ಹಣ್ಣಿನ ಗೊಂಚಲು, ನೋಡಲು ಮನವೇ ಮರುಳು

0
1135

ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಉಂಚಳ್ಳಿಯ ಕೃಷಿಕ ದನಂಜಯ ಕೆ. ಹೆಗಡೆಯವರು ಆರೈಕೆ ಮಾಡಿ ಬೆಳೆಸಿದ ಸುಮಾರು ೮ ರಿಂದ ೯ ವರ್ಷದ ಹಲಸಿನ ಗಿಡದಲ್ಲಿ (ಭಕ್ಕೆ) ಪ್ರತಿಯೊಂದು ಟೊಂಗೆಗಳಲ್ಲಿ ನೂರಕ್ಕೂ ಮೇಲ್ಪಟ್ಟು ಹಲಸಿನ ಕಾಯಿಗಳನ್ನು ಬಿಟ್ಟು ಜನರ ಆಕರ್ಷಣೆಗೆ ಅಣಿಯಾಗಿದೆ.

ಕೃಷಿಯನ್ನೇ ತಮ್ಮ ಜೀವನಾಧಾರ ಮಾಡಿಕೊಂಡ ದನಂಜಯ ಹೆಗಡೆ ಬಹುಮುಖ ಬೆಳೆಯ ಕೃಷಿಕರಾಗಿರುವುದು ಇಲ್ಲಿ ಉಲ್ಲೇಖನೀಯ. ಅಡಿಕೆ ಕೃಷಿಯೊಂದಿಗೆ ತೆಂಗು ಬಾಳೆ, ಅನಾನಸ್, ಮಾವು, ಚಿಕ್ಕು, ಶುಂಠಿ ಅದರೊಂದಿಗೆ ವಿಶೇಷವಾಗಿ ಹಣ್ಣಿನ ಗಿಡಗಳನ್ನು ಕೂಡಾ ಇವರು ಬೆಳೆಸಿದ್ದು ಇವರ ಕೃಷಿ ಕಾರ್ಯ ಚಟುವಟಿಕೆಯನ್ನು ನೋಡಿಯೇ ಅರಿಯಬೇಕು. ಹಲಸಿನಲ್ಲಿ ಬರುವ ಅನೇಕ ಬಗೆಯ ಉಪ ಜಾತಿಗಳನ್ನು ಬೆಳೆಸಿದ ಹೆಗಡೆಯವರ ಅನೇಕ ಮರದಲ್ಲಿ ಮೈ ತುಂಬಾ ಹಲಸಿನ ಕಾಯಿ (ವಿವಿಧ ಬಕ್ಕೆ ಕಾಯಿ) ಬಿಟ್ಟು ಇದುವರೆಗೆ ಅನೇಕ ಪರ ಊರುಗಳಿಗೂ ಸಾಗಿ ದನಂಜಯರವರ ಕೃಷಿ ವಿಧಾನ ಕೀರ್ತಿಗೆ ಪಾತ್ರವಾಗುತ್ತಿದೆ.

– ಗಿರಿಧರ ಕಬ್ನಳ್ಳಿ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ