ಕಣ್ಣಂಚಿನ ಆ ಕುಡಿನೋಟ

0
1143

ಹೇ ಒಲವೇ ,
ಕಣ್ಣಂಚಿನ ಆ ಕುಡಿನೋಟ ನನ್ನೊಡಲ ಕೊರೆಯುತ್ತಿರುವಕೋಲಾಹಲಗಳಿಗೆ ಪೂರ್ಣವಿರಾಮ ಹಾಕಲು ತೋರುತ್ತಿರುವ ಹಸಿರು ನಿಶಾನೆಯೇ ?
ನಿನ್ನ ಕಿರುನಗೆಯಲ್ಲಿರುವ ಭಾವಭಂಗಿಯ ಮರ್ಮ , ನನ್ನ ಪ್ರೇಮ ಪರಾಕಾಷ್ಠೆಯ ಮನದ ತೊಳಲಾಟಗಳಿಗೆ ದಿಗ್ಭಂಧನ ಹಾಕಿ ಒಡನಾಡಿಯಾಗುವ ಸೂಚ್ಯಕವೇ?

ನವನವೀನ ಭಾವದ ಸ್ನೇಹಸರೋವರದಲ್ಲಿ ಈಜಾಡುವ ಮುನ್ನ ಮನದಾಳದ ಇಂಚಿಂಚನ್ಶ ಅರಿಯುವ ಹಂಬಲ. ಪುಟಿದೇಳುವ ಹುಚ್ಚುಚ್ಚು ಆಸೆಗಳಿಗೆ , ಮುಗಿಬೀಳುವ ಅನುರಾಗದ ಆಲಾಪನೆಯ ಕನಸುಗಳಿಗೆ ,ಮರೆಯಿಂದ ಇಣುಕಿ ಕಂಬನಿಯ ಕಣ್ಣಿಗೆ ಹ್ರದಯಸ್ಪರ್ಶಿಯಾಗುವ ಕಲ್ಪನೆಗಳಿಗೆ, ಒಂದಿನಿತು ಯೋಚಿಸದೇ ,
ಮ್ರದುಲ ಭಾವದಾಲಿಂಗನಕ್ಕೆ ಮನಕರಗಿಸಿ ಸಹಕರಿಸಿ ತುಸು ಉಳಿಸುವೆಯಾ ಈ ಬಡಜೀವವನ್ನ..

ಹೇಳು ನೀ… ಹೇ ಒಲವೇ……!!

– ವಿನಾಯಕ್ ಭಟ್ಟ (ಖುಷಿವಿನು)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ