ಅಂತರ್ಜಾಲದಲ್ಲಿ ಉಚಿತ ಶಿಕ್ಷಣ

0
1956

ಇಂದಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಅತ್ಯಗತ್ಯ. ಈ ಕೆಲವು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ವಿಷಯಗಳು ಅದಲು ಬದಲುಗೊಂಡು, ಹೊಸ ಹೊಸ ವಿಷಯ ಸೇರ್ಪಡೆಗೊಂಡಿವೆ. ಜಗತ್ತು ಬದಲಾದಂತೆ, ತಂತ್ರಜ್ನಾನಗಳು ಬದಲಾಗಿವೆ. ಅಂತೆಯೇ ಶಿಕ್ಷಣದಲ್ಲೂ ಹಾಗೂ ಉದ್ಯೋಗ ಕ್ಷೇತ್ರಗಳಲ್ಲೂ ಸಾಕಷ್ಟು competition   ಏರ್ಪಟ್ಟಿದೆ. Competition ಏರ್ಪಟ್ಟಂತೆ ಉನ್ನತ ವ್ಯಾಸಂಗಕ್ಕೆ ತಾಮುಂದು ನೀ ಮುಂದು ಎಂದು ಧಾವಿಸುವವರೂ ಹೆಚ್ಚಾಗಿದ್ದಾರೆ.

ಹೀಗಿದ್ದರೂ ನಮಗೆ ಅತ್ಯುತ್ತಮ ಜ್ನಾನಾರ್ಜನೆಯ ಗುಣಮಟ್ಟ ಈ ಶಿಕ್ಷಣ ಸಂಸ್ಥೆಗಳಿಂದ ದೊರಕುತ್ತಿದೆಯೇ? ಪ್ರಶ್ನೆ ಸರಿ ಅಲ್ವಾ?

ಹಂ. ನನ್ನನಿಸಿಕೆ ಪ್ರಕಾರ ಇಲ್ಲ. ಶಿಕ್ಷಣ ಕ್ಷೇತ್ರಗಳು ಇನ್ನೂ ಹಳೆಕಾಲದಲ್ಲೆ ಕಾಲದೂಡುತ್ತಿದೆ. ನಮಗೆ ಬೇಕಾದ್ದನ್ನು ಬೇಕಾದ್ದಂತೆ ಕಲಿಯುವದು ಕಷ್ಟಕರವೇ ಸರಿ. ಅಲ್ಲದೆ ಕೆಲಸಕ್ಕೂ ಕಲಿಕೆಗೂ ಸಾಕಷ್ಟು ಅಂತರ. ಎಷ್ಟೇ ಕಲಿತರೂ ಯಾವುದೇ ಉದ್ಯೋಗ ಸೇರಿದರೂ ಅಲ್ಲಿ ಪ್ರತ್ಯೇಕ training ಬೆಕೇ ಬೆಕು.

ಇಂತಹ ಸಮಸ್ಯೆಗಳಿಗೆ ಕೆಲವು ಅಂತರ್ಜಾಲ ತಾಣಗಳು ಸಾಕಷ್ಟು ಪರಿಹಾರ ಒದಗಿಸುತ್ತಿವೆ. ಹಾಗೂ ಸಂಪೂರ್ಣ ಉಚಿತವಾಗಿ ಸಾಕಷ್ಟು ಹೆಚ್ಚಿನ ತಂತ್ರಜ್ನಾನ ಬಳಸಿ ನಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಾಕಷ್ಟು ಸಫಲತೆ ಕಂಡಿವೆ. ಇಂತಹ ಅಂತರ್ಜಾಲ ತಾಣಗಳ ಉಪಯೋಗ ಪಡೆದು ನಿಮ್ಮಿಷ್ಟದ ಹೆಚ್ಚಿನ ಜ್ನಾನಾರ್ಜನೆ ಮಾಡಿಕೊಳ್ಳಬಹುದು.

ಅದು ಹೇಗೆ? ಯಾವದು ಅದು ಅಂತಿದಿರಾ?

Khan Academy
Salman Khan (ಭಾರತದ ಚಿತ್ರ ನಟರಲ್ಲ) ಇವರು ೨೦೦೬ರಲ್ಲಿ ಉಚಿತ ಶಿಕ್ಷಣ ನೀಡುವುದಕ್ಕೊಸ್ಕರವೇ ಆರಂಭಿಸಿದ Online Education Academy ಇಂದು ಸಾಕಷ್ಟು ಯಶಸ್ವಿಯಾಗಿ ಜ್ನಾನಾಭಿವೃದ್ದಿಗಯ್ಯುತ್ತಿದೆ.

Khan Academy ಒಂದು ಅಂತರ್ಜಾಲ ತಾಣ. ಇದು ಸಂಪೂರ್ಣ ಉಚಿತ, ಉತ್ತಮ ಗುಣಮಟ್ಟದ ಶಿಕ್ಷಕರು ಹಾಗು ಉತ್ತಮ ತಂತ್ರಜ್ನಾನ ಒಳಗೊಂಡಿದೆ. ಇದರಲ್ಲಿ ಗಣಿತ, ವಿಜ್ನಾನ, ಅರ್ಥಶಾಸ್ತ್ರ ಹಾಗು ಹಣಕಾಸು ಹಾಗೂ ಕಂಪ್ಯೂಟರ್ ತಂತ್ರಜ್ನಾನ ಇನ್ನಿತರ ಮುಖ್ಯ ವಿಷಯಗಳನ್ನು ಕಲಿಯಬಹುದಾಗಿದೆ.

ಬಳಕೆ ಹೇಗೆ?
ಈ site ನ್ನು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು, ಶಿಕ್ಷಕ, ಶಿಕ್ಷಕಿಯರು ಹಾಗೂ ಪಾಲಕರೂ ಕೂಡ ಬಳಸಬಹುದು.
ಬಳಕೆ ತುಂಬಾ ಸುಲಭ. ಕೆಳಗೆ ನೀಡಿರುವ ಕೊಂಡಿ ಬಳಸಿ ತಮ್ಮ E-mail ಉಪಯೋಗಿಸಿ Register ಮಾಡಿಕೊಳ್ಳಬೇಕು. ಪಕ್ಕದಲ್ಲಿ ಕಾಣುವ ಸೂಚಿ ಪ್ರಕಾರ ತಮ್ಮ ವಿಷಯ ಆಯ್ದುಕೊಂಡು ತಮ್ಮ ಜ್ನಾನಾಭಿವೃದ್ದಿಮಾಡಿಕೊಳ್ಳಬಹುದು.

 

http://goo.gl/YbxG5t

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ