( ನೋವಿನಲ್ಲಿ ನೊಣ ಹೊಡಿತಿದ್ದ ಯುವಕನಿಗೆ ಹೊಸ ಪ್ರೀತಿ ಹುಟ್ಟಿದಾಗ ಆದ ಸಹಜ ತಳಮಳದ ಒಂದು ಸಿಂಪಲ್ ಚಿತ್ರಣ)

ಬದಲಾಗಿದ್ದೆ ನಾ
ಬವಣೆಗಳ ಹೊಯ್ದಾಟದಲಿ
ಬದಲಾಗಿದ್ದೆ ನಾ
ಭಾವನೆಗಳ ಜೂಟಾಟದಲಿ

ಹೆಜ್ಜೆಗಳು ಜೋಕಾಲಿಯಾಗಿದ್ದವು
ಯೋಚನೆಗಳು ಬುಗುರಿಯಾದವು
ಆಸೆಗಳು ನಿಂತ ನೀರಾದವು

ಆದವು-ಆಗಿದ್ದವು ಎರಡೂ ಇಲ್ಲೊಂದೇ
ಗತ-ಪ್ರಸ್ತುತಗಳ ಹಾಹಾಕಾರ
ವಾಸ್ತವದ ಸಮಾಚಾರ
ಹೇಳುವುದಿದ್ದರೆ ಅದು ‘ನೀನು’ ಎಂಬುದೊಂದೇ

ಬದಲಾಗಿದ್ದೆ ನಾ
ಒಲವಿನ ನೂಪುರದ ಇಂಪಿಲ್ಲದೇ
ಸುಹಾದಿ ಹಿಡಿದೆ ನಾ
ಭರವಸೆಯ ಗಾಳಿ ತುಂಬಿದ ನಿನ್ನ ನಗುವಲ್ಲಿ

ನಿನ್ನ ನಗುವೊಂದೇ ತಿರುವಲ್ಲ
ಮುದ್ದು ಮುದ್ದು ಮಾತೆಂದು ಹೇಳಲೇ?
ಸುಪ್ತ ಮನಸ್ಸೆಂದು ಹೇಳಲೇ?
ನಡೆನುಡಿಯೆಂದು ಹೇಳಲೇ?
ಸಲಹುವ ರೀತಿಯೆಂದು ಹೇಳಲೇ?

ನಾನೇನೇ ಹೇಳಿದರೂ
ನಿನಗೆ ಸರಿಸಮವಲ್ಲ
ನೀ ನನ್ನ ತಳ್ಳಿದರೂ
ಬಾಳು ಒಣ ಹವೆಯಲ್ಲ

ಕಾರಣ ನೀನೊಂದೇ ನಿನ್ನ ನೆನಪೊಂದೇ
ಆದರೂ ನೀ ತಳ್ಳಿದ ಮರುಕ್ಷಣ
ಜೀವಂತ ಶವ ನಾನು
ಸಂಹಾರ-ಸಂಸಾರಗಳ ಆಯ್ಕೆಯೊಡತಿ ನೀನು

– ವಿನಾಯಕ ಭಟ್ (ಖುಷಿವಿನು)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ