ಮತ್ತೊಂದು ಮುಖ

0
960

(ವಿಷೇಶ ಲೇಖನ: ಇದು ಒಂದು ವಿಷೇಶ ಲೇಖನ. Sirsi.Info ಗೊಸ್ಕರವೇ ಎಸ್.ವಿ. ಕೃಷ್ಣಮೂರ್ತಿ ಹಾಗೂ ವಿನಯಕ ಭಟ್ ಅವರುಗಳು ಸಿದ್ದಪಡಿಸಿದ ಲೇಖನ.
ಎಸ್.ವಿ. ಕೃಷ್ಣಮೂರ್ತಿ ಯವರು ಅದ್ಬುದ ಚಿತ್ರಕಾರರು. Sirsi.Infoಹಾಗೂ ಇದರ ಬಳಕೆದಾರರಿಗಾಗಿಯೇ ಚಿತ್ರಗಳನ್ನು ಬಿಡಿಸಿ ನಿಮ್ಮೆದುರಿಗಿರಿಸಿದ್ದಾರೆ. ತಮ್ಮ ಮನದ ಕಲ್ಪನೆಯನ್ನು ಚಿತ್ರದ ರೂಪದಲ್ಲಿ ನೀಡುವ ಸಕಲ ಪ್ರಯತ್ನವನ್ನೂ ನಡೆಸಿ ನಿಮ್ಮೆದುರಿಗಿರಿಸಿದ್ದಾರೆ.
ಈ ಚಿತ್ರವನ್ನು ಆಧರಿಸಿ ವಿನಾಯಕ ಭಟ್ ಅವರು ಅರ್ಥಪೂರ್ಣ ಲೇಖನ ಬರೆದಿದ್ದಾರೆ. ಇವರಿಬ್ಬರ ಅದ್ಭುತ ಸಂಯೋಜನೆಯನ್ನು ನಿಮ್ಮೆದುರಿಗಿರಿಸಿ ಇವರನ್ನು ನಿಮ್ಮ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇವೆ.)

 ಪ್ರತಿಯೊಬ್ಬ ವ್ಯಕ್ತಿಯ ರೂಪ ಬೇರೆ ಬೇರೆ ಥರವೇ ಇದ್ದಿರತ್ತೆ. ನಾವು  ಹೊರರೂಪವನ್ನು ನೋಡಿ ಆತನನ್ನು ಊಹಿಸಿಕೊಳ್ಳುವುದಕ್ಕಿಂತ ಆತನ ಒಳರೂಪ, ಮೂಲ ಸ್ವರೂಪ ಬೇರೆಯೇ ಆಗಿರುತ್ತೆ. ಈ ಜಗತ್ತು, ಈ ಜೀವನ ನಾವಂದುಕೊಂಡಂತೆ ಇರುವುದಿಲ್ಲ. ಯಾರದೋ ಯಾಕೆ? ನಮ್ಮೊಳಗಿನ ಮತ್ತೊಂದು ಮುಖವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಎಷ್ಟೋ ಸಲ ನಾವು ಸಂಬಂಧಿಗಳ ಹತ್ತಿರ ಮಾತಾಡುತ್ತಿರುವಾಗ ಒಳಗೊಳಗೆಯೇ ಅವರ ಬಗ್ಗೆ ಮತ್ತೇನೋ ಯೋಚ್ನೆ ಮಾಡ್ತಿರ್ತೀವಿ. ಮುಖದಲ್ಲಿ ನಗುವಿದ್ದರೂ ಮನದೊಳಗೆ ಕೋಪವೂ ಇರಬಹುದು, ಹೊಟ್ಟೆಯುರಿಯೂ ಇರಬಹುದು, ದ್ವೇಷವೂ ಇರಬಹುದು.  ತೋರ್ಪಡಿಕೆಯ ಮುಖ ಮಾತ್ರ ಮಂದಸ್ಮಿತವಾಗಿರುತ್ತದೆ ಅಲ್ಲವಾ? ಇನ್ನೂ ಕೆಲವೊಮ್ಮೆ ನಾವು ಸ್ನೇಹಿತೆಯೊಬ್ಬಳ ಬಳಿ ಮಾತಾಡುವಾಗ ನಮ್ಮ ಮನಸ್ಸು ನೆಗೆಟಿವ್ ಲೋಕದಲ್ಲಿ ತೇಲುವುದೇ ಜಾಸ್ತಿ. ಅವಳಿಗೆಷ್ಟೆಷ್ಟು ಬಾಯ್ ಫ್ರೆಂಡ್ಸ್ ಇದ್ದಾರೋ ಏನೋ, ಅವಳು ದಿನಾಲೂ ಎಷ್ಟು ಜನರೊಂದಿಗೆ ಸುತ್ತಾಡ್ತಾಳೋ ಏನೋ ಅಂತ. ರಸ್ತೆಯಲ್ಲಿ ಒಂದು ಹುಡುಗಿ ಕಂಡ್ರೆ “ವಾವ್ ಎಂಥಾ ಫಿಗರ್ರು, ಒಂದ್ ಸಲ ಸಿಕ್ಕಿದ್ರೆ…. ಅಂತೆಲ್ಲಾ ಏನೇನೋ ನೋಡಿ ಏನೇನೋ ಅಂದ್ಕೊಂಡು ಸ್ವರ್ಗದ ಫ್ರಂಟ್ ಡೋರ್ ತನಕ ಹೋಗಿ ಬರೋರು ಇದ್ದಾರೆ (ಇಂದು ಶೇಕಡಾ 40ರಷ್ಟು ಹುಡುಗಿಯರು ಕಾಯಿನ್ ಬಾಕ್ಸ್ ಕಾಣೋ ಥರನೇ ಡ್ರೆಸ್ ಮಾಡ್ಕೊಂಡು ಅದನ್ ಹುಡುಗ್ರು ನೋಡಿದ್ರು ಅಂತ ಖಾತ್ರಿ ಆದ್ಮೇಲೆ ಅದ್ರಲ್ಲೂ ಚೂರು ಪಾರು ಮಜಾನಾ ಮನಸಲ್ಲೇ ಅನುಭವಿಸುವವರಿದ್ದಾರೆ ಬಿಡಿ). ಇಂತಹ ವಿಷಯಗಳಲ್ಲಿ ಹುಡುಗರು ಪಾರದರ್ಶಕ. ಹುಡುಗೀರು ಅಪಾರದರ್ಶಕ. ಏನೂ ಮಾಡಕಾಗಲ್ಲ. ಇವೆಲ್ಲಾ ಸಣ್ಣ ಸಣ್ಣ ಮುಖಗಳು, ಸಹಜ ವಿಚಾರಗಳು.

ಕೆಲವರು ಹೊರನೋಟದಿಂದ ಉತ್ತಮನಲ್ಲ ಎನಿಸಿದರೂ ಅವರೊಳಗೊಂದು ಸೂಕ್ಷ್ಮವಾದ ಮನಸ್ಸಿರತ್ತೆ. ಅದರೊಳಗೆ ಭಾವನೆಗಳ ಗೋಪುರವೇ ನಿರ್ಮಿತವಾಗಿರುತ್ತೆ. ಅವರ ನಿಜವಾದ ಸ್ನೇಹಿತರು ಮಾತ್ರ ಅದನ್ನು ಗುರುತಿಸಬಲ್ಲರು.
ಅಪಾಯಕರ ಬೆಳವಣಿಗೆಯೆಂದರೆ ಕೆಲವರಲ್ಲಿ ತುಂಬಿಕೊಂಡಿರುವ, ಯಾರೂ ಅಂದಾಜು ಮಾಡಲಾಗದ ವಿಕೃತೆಯ ಬಾವ.ಆ ವಿಕೃತ ಮನಸ್ಸು ಎಂತವರನ್ನಾದರೂ ಬಲಿ ತೆಗೆದುಕೊಳ್ಳುವಷ್ಟು ಶಕ್ತಿಯುತವಾಗಿರುತ್ತದೆ. ಆ ಕರಾಳ ಮುಖದ ದರ್ಶನವಾಗುವುದು ಅನಾಹುತವಾದ ನಂತರವೇ. ಸಣ್ಣ ಪುಟ್ಟ ಕಲಹ, ಮನಸ್ತಾಪಗಳಿಂದಾದ ಬೇಸರವೇ ಬೃಹದಾಕಾರದ ದ್ವೇಷವಾಗಿ ಮಾರ್ಪಟ್ಟು ಕೊಲೆ ಮಾಡುವಷ್ಟು ಸನಿಹಕ್ಕೆ ಆ ಭಾವ ತಲುಪಿರುತ್ತದೆ. ಇನ್ನೆಷ್ಟೋ ವ್ಯಕ್ತಿಗಳಲ್ಲಿ ‘ವಿಕೃತ ಕಾಮಿ’ ಉದ್ಭವವಾಗಿಬಿಡುತ್ತಾನೆ. ಅವಕ್ಕೆಲ್ಲಾ ಚಿಕ್ಕ ಪುಟ್ಟ ಇನ್ಸಿಡೆಂಟ್ ಗಳೇ ಸಾಕಾಗಿಬಿಡುತ್ತವೆ.  ಹದಿಹರೆಯಕ್ಕೆ ಬಂದಾಗ ಹುಡುಗಿಗಾಗಲೀ, ಹುಡುಗನಿಗಾಗಲೀ ಸೆಕ್ಸ್ ಅಂದರೆ ಅದೆಂತದೋ ಕುತೂಹಲ, ವಿಪರೀತ ಆಸಕ್ತಿ. ಅವುಗಳ ಭಾರವನ್ನು ಇಳಿಸಿಕೊಳ್ಳಲು ಸೆಕ್ಸ್ ವೀಡಿಯೋಗಳನ್ನು ಕದ್ದು ಮುಚ್ಚಿ ನೋಡಿಬಿಡುತ್ತಾರೆ. ಕಂಟ್ರೋಲ್ ಮಾಡಿಕೊಳ್ಳಲಾಗದ ಹುಡುಗ ‘ಯಾವವ್ಳಾದ್ರೂ ಸಿಗಲಿ’ ಅಂತ ಕ್ಯಾಚ್ ಹಾಕೋ ಯೋಜನೆ ರೂಪಿಸುತ್ತಾನೆ.ಒಂದು..ಎರಡು.. ಮೂರು.. ಹೀಗೆ ವಾರವಾರಗಳು ಕಳೆದು ನಿರೀಕ್ಷೆ ವಿಫಲವಾದಾಗ ಅವರಲ್ಲೊಬ್ಬ ವಿಕೃತ ವ್ಯಕ್ತಿ ಹುಟ್ಟಿಕೊಳ್ಳುತ್ತಾನೆ. ಕೊನೇಪಕ್ಷ ಪ್ರೈಮರಿ ಹುಡುಗಿ ಸಿಕ್ಕರೂ ಸೈ ಎಂಬ ನಿರ್ಧಾರವನ್ನ ಅವನೊಳಗಿನ ವಿಕೃತ ಮನಸ್ಸು ಮಾಡಿಯಾಗಿರುತ್ತದೆ. ಇಂತಹ ಯೋಜನೆಗಳು ಅನಾವರಣಗೊಂಡಾಗಲೇ ಅನಾಹುತವೆಂಬ ಪ್ರಳಯವಾಗೋದು. ಇಂದು ವಿಕೃತ ಮನಸ್ಸುಗಳಿರೋರಲ್ಲಿ ಹೆಚ್ಚಿನ ಭಾಗಕ್ಕೆ ‘ಕಾಮ’ವೇ ಮುನ್ನುಡಿ ಬರೆಯುತ್ತಿರುವುದು ಎಂಬುದು ಯೋಚಿಸತಕ್ಕ ಸಂಗತಿ.
ಇಂದು ಮದುವೆಯಾದ ಮಹಿಳೆಯರಲ್ಲಿ ಅದೆಷ್ಟು ಜನ ಪರಪುರುಷನೊಡನೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿಲ್ಲ ಹೇಳಿ?
ಇಂದು ಯೌವ್ವನಕ್ಕೆ ಕಾಲಿಡುತ್ತಿದ್ದಂತೆಯೇ ಅದೆಷ್ಟು ಹುಡುಗಿರು ಕನ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಹೇಳಿ?
ಒಬ್ಬ ವ್ಯಕ್ತಿಯಲ್ಲಿ ಅಡಗಿದ ಕರಾಳ ಮುಖವನ್ನ ಯಾರೂ ಗುರುತಿಸೋಕೆ ಸಾಧ್ಯವಿಲ್ಲ. ಹಾಗೆಯೇ ಅಂತಹ ಕರಾಳ ಮುಖಗಳ ಉದ್ಭವಕ್ಕೆ ಸಣ್ಣ ಸಣ್ಣ ವಿಷಯಗಳೇ ಕಾರಣವಾಗುತ್ತವೆ. ನಾವು ನಮ್ಮಲ್ಲಿರುವ ಸಣ್ಣ ಸಣ್ಣ ದೋಷಗಳನ್ನೂ ಹುಡುಕೋಣ, ಸಾಧ್ಯವಾದಷ್ಟು ಸರಿಪಡಿಸಿಕೊಳ್ಳೋಣ, ಕೆಲವೊಂದು ವಿಚಾರಗಳಲ್ಲಿ ಮನಸ್ಸನ್ನ ನಿಯಂತ್ರಣ ಮಾಡಿಕೊಳ್ಳೋಣ. ಇದರಿಂದ ನಮ್ಮಲ್ಲಿಯ ವಿಕೃತ ಮನಸ್ಸನ್ನ ಹಂತಹಂತವಾಗಿಯಾದರೂ ಕೊಲ್ಲಬಹುದು ಅಲ್ಲವೇ?
                                                                  -ವಿನಾಯಕ ಭಟ್ (ಖುಷಿ ವಿನು)

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ