22.4 C
Sirsi, Karnataka
Saturday, July 22, 2017
Home ಸುದ್ದಿ ಸ್ಥಳೀಯ

ಸ್ಥಳೀಯ

​ಕಾರವಾರದ ದೇವಾಲಯಗಳ ಆವರಣದಲ್ಲಿ ಪಹರೆಯ ಸ್ವಚ್ಚತೆ

ಕಾರವಾರ: ಕಳೆದ ಸುಮಾರು ಮೂರು ವರ್ಷಕ್ಕೆ ಸಮೀಪ ಸ್ವಚ್ಚತೆಯನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಪಹರೆ ವೇದಿಕೆ ಈ ವರ್ಷದ ಮಳೆಗಾಲದಲ್ಲಿ ದೇವಾಲಯಗಳ ಆವರಣವನ್ನ ಸ್ವಚ್ಚಗೊಳಿಸಿ ಭಕ್ತಾದಿಗಳ ಪ್ರಶಂಸೆಗೆ ಕಾರಣವಾಗುತ್ತಿದೆ.. ಪ್ರತಿ ಶನಿವಾರ ಮುಂಜಾನೆಯಲ್ಲಿ ಕಾರವಾರದ ನೂರಾರು ಕಾರ್ಯಕರ್ತರ ಸಹಯೋಗದೊಂದಿಗೆ ಪಹರೆಯ ಈ ಅಭಿಯಾನ ನಿರಂತರವಾಗಿ ಮುನ್ನಡೆಯುತ್ತಿದೆ. ಕಳೆದ ವಾರ ನಗರದ ಬಾಡದಲ್ಲಿರುವ ಪ್ರಸಿದ್ದ ಮಹಾದೇವಸ್ಥಾನದಲ್ಲಿ ಸ್ವಚ್ಚತೆಯನ್ನ ಪಹರೆ...

​ಕಾರವಾರದಲ್ಲಿ ಹೋಂ ಸ್ಟೇ ಸಾಧ್ಯತೆ

ಕಾರವಾರ: ಪಹರೆ ವೇದಿಕೆಯ ಚಿಂತನ ಮಂಥನ ವಿಭಾಗದಿಂದ ಎರಡನೇ ಕಾರ್ಯಕ್ರಮ ಇಂದು ಕಾರವಾರದ ಕನ್ನಡ ಭವನದಲ್ಲಿ ಜರುಗಿತು. ಈ ತಿಂಗಳ ವಿಷಯ ಕಾರವಾರದಲ್ಲಿ ಹೋಂಸ್ಟೇ ಸಾಧ್ಯತೆ ಎಂದು ಇದ್ದು ಈ ವಿಷಯದ ಮೇಲೆ ಕುಮಟಾದ ಪ್ರಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿರಾಜ್ ಕಡ್ಲೇ, ಹೋಂ ಸ್ಟೇ ಉದ್ಯಮಿ ಶ್ರೀ ರಾಜೀವ್ ಗಾಂವಕರ್ ಮತ್ತು ಚಿಂತಾಮಣಿ...

ಕಾರವಾರದ ಮುದಗಾ ಬಳಿ ಅಪಘಾತ

ಕಾರವಾರ:​ ಎರಡು ಬೈಕಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಕಾರವಾರದ ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ ೬ ರಲ್ಲಿ ಈ ದುರ್ಘಟೆನೆ ಸಂಭವಿಸಿದ್ದು ಸಂದೀಪ ದುರ್ಗೇಕರ (೩೦) ಎಂಬುವವರು ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ಮೂವರ ಸ್ಥಿತಿ ಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಪುರಸ್ಕಾರ

ಉದ್ಯಮಿ ಉಪೇಂದ್ರ ಪೈ ಅಧ್ಯಕ್ಷತೆಯ ‘ಉಪೇಂದ್ರ ಪೈ ಸೇವಾ ಟ್ರಸ್ಟ್’ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಶಿರಸಿ ಸಿದ್ದಾಪುರ ತಾಲೂಕಿನ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಗರಿಷ್ಠ ಅಂಕ ಪಡೆದ ಅವಶ್ಯಕ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ಪ್ರಸಕ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು 24-06-2017 ಶನಿವಾರ...

ಲಿಂಗದಕೋಣ ಕಲ್ಯಾಣಮಂಟಪದಲ್ಲಿ  ಮಲೆನಾಡು ಮೇಳ

ಜ್ಯೂನ್ ೨೧ರಂದು  ಶಿರಸಿಯ ಲಿಂಗದಕೊಣ ಕಲ್ಯಾಣಮಂಟಪದಲ್ಲಿ ಒಂದು ದಿನದ ಮಲೆನಡು ಮೇಳ ಹೊಮ್ಮಿಕೊಳ್ಳಲಾಗಿದೆ. ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗಳಿದ್ದು ಅಭಿರುಚಿಕರು ಭಾಗವಹಿಸಬಹುದಾಗಿದೆ.

​ಕಾರವಾರ ಕಡಲ ತೀರದಲ್ಲಿ ಅನ್ಯಗ್ರಹ ಜೀವಿಗಳು

ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ ಕವಿದು ಇನ್ನೂ ಕತ್ತಲೆಯ ವಾತಾವರಣವೇ ಇತ್ತು. ಅಂತಹ ಸಂಧರ್ಭದಲ್ಲಿ ವಾಯು ವಿಹಾರಕ್ಕೆ ಬಂದ ಕೆಲ ಜನ ಕುತೂಹಲದಿಂದ ಸಮೀಪ ಹೋಗಿ...

ಶಿರಸಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು

ಮೂಲ ನೆಲ ಜಲ ಸಂಸ್ಕ್ರತಿ ವೇದಿಕೆ, ಹುಳಗೋಳದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡ ಅವರೊಂದಿಗೆ ‘ಮನೆಯಂಗಳದಲ್ಲಿ ಮಾತುಕತೆ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀಮತಿ ರಾಜೇಶ್ವರಿ ಹೆಗಡೆಯವರ ಮನೆಯಲ್ಲಿ 19-06-2017ರ ಸೋಮವಾರದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಅಂಚೆ, ಹುಳಗೋಳದ ಶ್ರೀ ದತ್ತಕೃಪಾ ನಿಲಯಕ್ಕೆ ಗೌಡರು ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು ಸಾಯಂಕಾಲದವರೆಗೂ...

ನಮ್ಮನ್ನಗಲಿದ ಮಾರಿಗುಡಿ ಮಾಜಿ ಅಧ್ಯಕ್ಷರು

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಈಗಿನ ಧಮ೯ದಶಿ೯ಗಳಾದ ಶ್ರೀ ವಿ ಯು ಪಟಗಾರ ಅವರು ವಿಧಿವಶರಾಗಿದ್ದಾರೆ

ಕುಮಟಾ ಬಳಿ ಕಾರು ಅಪಘಾತ

ಕುಮಟಾ ತಾಲೂಕಿನ ಮಿರ್ಜಾನ ಬಳಿ ಹೈವೇಯಲ್ಲಿ ಸಾಗುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಾಣಾಪಯವಾಗಿಲ್ಲ. ಸಣ್ಣಪುಟ್ಟಗಾಯಗಳಾಗಿದ್ದು ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ಅಧಿಕ ಮಳೆ ಹಾಗೂ ರಸ್ತೆ ವಿಸ್ತರಣೆಯಿಂದಾಗಿ ಹೆಚ್ಚಿದ ಅಪಘಾತ ಜನರಲ್ಲಿ ಭಯದ ವಾತಾವರಣ ಎರ್ಪಟ್ಟಿದೆ. ಇದನ್ನು ತಡೆಯಲು ಆಡಳಿತ ಸಜ್ಜಾಗಬೇಕು ಹಾಗೂ ಜನರೂ ಎಚ್ಚರಿಕೆಯಿಂದ ವಾಹನ...

ಯಲ್ಲಾಪುರದಲ್ಲಿ ಅಫಘಾತ – ಸಾವು

ಬೈಕ್ ಸ್ಕಿಡ್ ಆಗಿ  ಬಸ್ಸಿನಡಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲ್ಲೂಕು ಪಂಚಾಯ್ತಿಗಳು ಎದುರು ಗುರುವಾರ ಮಧ್ಯಾಹ್ನ ನಡೆದಿದೆ.      ಪಟ್ಟಣದ ಅಡಿಕೆ ವ್ಯಾಪಾರಿ ವಿಶ್ವನಾಥ ಶ್ರೀಪಾದ ಶಾನಭಾಗ ( ದಯಾನಂದ ಶಾನಭಾಗ)(60) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಬಸ್ ಬೆಲ್ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಸಾರಿಗೆ...

ಹೆಚ್ಚು ಕಾಮೆಂಟಗಳು

ಮೆಲಿನ ಓಣಿಕೇರಿಯ ಕಾರ್ಯಾಗಾರದಲ್ಲಿ ಅನಂತಕುಮಾರ ಹೆಗಡೆ

ಕದಂಬ ಫೌಂಡೇಶನ್ ಶಿರಸಿ, ತಟ್ಟಿಸರ ಗ್ರೂಪ್ ಸೇವಾ ಸಹಕಾರಿ ಸಂಘ, ಮೆಲಿನ ಓಣಿಕೇರಿ ಮತ್ತು ಕೇಂದ್ರೀಯ ಔಷಧೀಯ ಹಾಗೂ ಸುಗಂಧ ಸಸ್ಯಗಳ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 17-06-2017 ರಂದು...

ಹಾಟ್ ನ್ಯೂಸ್