ಕಾರವಾರ: ಬಿಣಗಾದ ಸೀತಾನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಮಹಿಳೆಯರು ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಗ್ರಾಮದಲ್ಲಿ ಅಕ್ರಮ ಗೋವಾ ಮದ್ಯವನ್ನು ಮಾರಾಟ ವಿಪರಿತವಾಗಿದ್ದು, ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಆದರೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಗ್ರಾಮದ ಶಾಂತಿ ಕಣ್ಣನ್ ಹಾಗೂ ವಿಜಯಾ ಕಣ್ಣನ್ ತಮ್ಮ‌ ಮನೆಯಲ್ಲಿಯೇ ಅಕ್ರಮ ಗೋವಾ ಮದ್ಯವನ್ನು ಸಂಗ್ರಹಿಸಿ ಮಾರಾಟ ಮಾಡುತಿದ್ದಾರೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಭಾರಿ ಎಚ್ಚರಿಸಿದ್ದರು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು‌‌ ದೂರಿದ್ದಾರೆ.
ಅಕ್ರಮ ಮದ್ಯದಿಂದಾಗ ಈ ಭಾಗದ ಗಂಡಸರು ದುಡಿದ ಹಣವನ್ನೆಲ್ಲ ಕುಡಿತಕ್ಕಾಗಿ ಖರ್ಚು ಮಾಡುತಿದ್ದಾರೆ. ಇದರಿಂದ ಸಂಸಾರ ನಡೆಸಲು ಕಷ್ಟವಾಗುತ್ತಿದೆ. ಅಲ್ಲದೆ‌ ಸಣ್ಣ ಮಕ್ಕಳು ಕೂಡ ಕುಡಿತದ ಚಟಕ್ಕೆ ಬಲಿಯಾಗುತಿದ್ದು ಆತಂಕಕ್ಕೆ ಕಾರಣವಾಗುತ್ತಿದೆ. ಶನಿವಾರ ವೆಂಕಟೇಶ ಲಂಬಾಣಿ ಎನ್ನುವವರಿಗೆ ಹಿಂದೆ ಸಾಲ‌ ಮಾಡಿದ ಕುಡಿದ ಹಣ ನೀಡಿಲ್ಲ ಡಂಬ ಕಾರಣಕ್ಕೆ ಮನಬಂದಂತೆ ಹೊಡೆದಿದ್ದು, ಈತನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ. ಅಲ್ಲದೆ ಈ ಬಗ್ಗೆ ಕೇಳಿದರೆ ಅವಾಚ್ಚ ಶಬ್ದಗಳಿಂದ ನಿಂದಿಸಿ ಧಮಕಿ‌ ಹಾಕುತಿದ್ದಾರೆ. ಆದ್ದರಿಂದ ಕೂಡಲೇ ಕಾನೂನು ಕ್ರಮ‌ಕೈಗೊಳ್ಳುವಂತೆ ಮಹಿಳೆಯರು‌ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸೀತಾ ದೊಡ್ಮನಿ, ಶಿಲ್ಪಾ ಲಮಾಣಿ, ಪಾರ್ವತಿ, ನಿರ್ಮಲಾ ಲಮಾಣಿ ಇದ್ದರು.

LEAVE A REPLY

Please enter your comment!
Please enter your name here