ಕೆ ಪಿ ಎಸ್ ಸಿ ಪರೀಕ್ಷೆ ಬರೆಯುವ ವೇಳೆ ಮೂರು ಜನ ಪರೀಕ್ಷಾರ್ಥಿಗಳು ದಾವಣಗೆರೆ ಪೊಲೀಸರ ವಶದಲ್ಲಿದ್ದಾರೆ,ಇದರ ರೂವಾರಿಗೆ ಪೊಲೀಸರು ಬಲೆ ಬೀಸಿದ್ದಾರೆ,ಅತ್ಯಾಧುನಿಕ ಮೊಬೈಲ್ ಉಪಕರಣ ಬಳಸಿ ಒಂದೇ ಭಾರಿಗೆ 3 ಜನರಿಗೆ KPSC ಪರೀಕ್ಷೆಯ ಉತ್ತರವನ್ನು ನೀಡುತ್ತಿದ್ದ, ಬಲ ಮತ್ತು ಎಡ ಕಿವಿಗೆ ಮೈಕ್ರೋ ಡಿವೈಜ್ ಸ್ಪೀಕರ್ ಅಳವಡಿಸಿಕೊಂಡಿದ್ದರು, ಕರಿ ಬಣ್ಣದ ಬನಿನ್ ನಲ್ಲಿ ಸಿಮ್ ಕಾರ್ಡ ಹಾಗೂ ಬ್ಯಾಟರಿ ಅಳವಡಿಸಿಕೊಂಡಿದ್ದರು,ದಾವಣಗೆರೆ ನಗರದ ಲಾಡ್ಜ್ ನಲ್ಲಿ ತಂಗಿದ್ದ ಇದರ ಪ್ರಮುಖ ತಲೆ ಮರೆಸಿಕೊಂಡಿದ್ದಾನೆ, ಖಚಿತ ಮಾಹಿತಿ ಮೇರೆಗೆ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು ,ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಸಿ ,ತಹಸೀಲ್ದಾರ್, ಎರಡು ಕಾಲೇಜುಗಳಲ್ಲಿ ಇಂದಿನ ಪರೀಕ್ಷೆ ಬರೆಯುವ ವೇಳೆ ದಾಳಿ ಮಾಡಿ 3 ಜನರನ್ನು ವಶಕ್ಕೆ ಪಡೆಯಲಾಗಿದೆ,ಇವರ ಬುದ್ದಿವಂತಿಕೆ ಮೆಚ್ಚಲೇ ಬೇಕಾಗಿದೆ,ಇಂದು ಪರೀಕ್ಷೆ ಬರೆದ ಅನೇಕರ ಜೊತೆ ಇವರು ಮಾಡಿದ ಘನಂದಾರಿ ಕೆಲಸಕ್ಕೆ ಪರೀಕ್ಷೆ ರದ್ದಾಗುವ ಸಂಭಂವವಿದೆ ಇಂತಹವರಿಗೆ ಶಿಕ್ಷೆ ಯಾಗಬೇಕು,ಇದರ ಜೊತೆ ಇನ್ನು ಅನೇಕ ಪರೀಕ್ಷೆಗಳಲ್ಲಿ ಇದೇ ಮಾದರಿ ಬಳಸಿರುವ
ಶಂಕೆ ಇದೆ,ತಮ್ಮ ಕಿವಿಯೊಳಗಿನ ಸಣ್ಣ ಗಾತ್ರದ ಮೈಕ್ರೋ ಡಿವೈಜ್ ಅನ್ನು ಮ್ಯಾಗನೇಟ್ ಬಳಸಿ ಹೊರ ತೆಗೆಲಾಯಿತು,,

LEAVE A REPLY

Please enter your comment!
Please enter your name here