ಚಾಮರಾಜನಗರ. ಅ೧೪. ಕೊಳ್ಳೆಗಾಲ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಕಂಡಕ್ಟರ್ ಸಾವಿಗೀಡಾಗಿದ್ದಾರೆ.

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ನಿವಾಸಿಯಾದ ಪ್ರದೀಪ ಕುಮಾರ ಕರ್ತವ್ಯ ನಿರ್ವಹಿಸುವಾಗ ಈ ದುರ್ಘಟನೆ ನಡೆದಿದೆ. ಇಂದು ಬೆಳಿಗ್ಗೆ ಕರ್ತವ್ಯ ನಿರ್ವಹಿಸುವಾಗ ವಾಂತಿಯಾಗಿ ಬಸ್ಸಿನಲ್ಲಿಯೇ ಕುಸಿದಿದ್ದರು. ನಂತರ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲೇ ಇಲ್ಲ.

ಈ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಜಕ್ಕಳ್ಳಿಯ ಇತ್ತಲದೊಡಿ ಗ್ರಾಮದಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here