ಹಳೆಯ ಹಾಗೂ ವ್ಯಾಪಕ ಬಳಕೆಯಲ್ಲಿದ್ದ ಯಾಹೂ ‌ಇಮೇಲ್ ವ್ಯವಸ್ಥೆ ಇತ್ತೀಚೆಗೆ ತನ್ನ ಚೈತನ್ಯ ಕಳೆದುಕೊಂಡು, ಅಲ್ಲೊಂದು ಇಲ್ಲೊಂದು ಬಳಕೆದಾರರನ್ನು ಪಡೆದಿದೆ.

ಆದರೆ ಇಂದು ಯಾಹೂ ಒಂದು ಸತ್ಯವನ್ನು ಹೊರಹಾಕಿದೆ. ಅದೇನೆಂದರೆ ಯಾಹೂ ಇಮೇಲ್ ಹ್ಯಾಕ್ ಆಗಿದ್ದು ಸತ್ಯ. ತನ್ನ ಮೂರು ಬಿಲಿಯನ್ ಬಳಕೆದಾರರ ಸಂಪೂರ್ಣ ವಿವರ ವಂಚಕರ‌ಪಾಲಾಗಿತ್ತು ಎಂದು ಅಧಿಕೃತವಾಗಿ ಹೇಳಿಕೊಂಡಿದೆ.

೨೦೧೩ ರಲ್ಲಿ ಯಾಹೂ ಹ್ಯಾಕ್ ಆಗಿದೆ ಎಂದು ಭರ್ಜರಿ ಗುಲ್ಲು ಹಬ್ಬಿತ್ತು. ಹಾಗೆಯೇ ಸಾಕಷ್ಟು ಜನರ ಅಕೌಂಟ ಕೂಡ ಹ್ಯಾಕ್ ಆಗಿ ಮಾಹಿತಿ ಸೋರಿಕೆಯಾಗಿತ್ತು. ಭಾರತದ ಎಲ್ಲ ಬಳಕೆದಾರರೂ ಈ ವಂಚನೆಗೆ ಒಳಗಾಗಿದ್ದರು.

ಇಷ್ಟು ವರ್ಷ ಈ ಸತ್ಯ ಮುಚ್ಚಿಟ್ಟಿದ್ದ ಯಾಹೂ ಅಂತೂ ಸತ್ಯ ಬಾಯ್ಬಿಟ್ಟಿದೆ.

LEAVE A REPLY

Please enter your comment!
Please enter your name here