ಶೂ ಮತ್ತು ಕ್ರೀಡಾಪರಿಕರಗಳ ಉತ್ಪಾದಕತೆಯಲ್ಲಿ ಪ್ರಸಿದ್ದವಾದ ‘ರಿಬಾಕ್’ ಕಂಪನಿಯ ಹೆಸರನ್ನು ನೀವು ಕೇಳಿರ್ತೀರಿ. ಆ ಕಂಪನಿ ವಿಶ್ವಮಟ್ಟದಲ್ಲಿಂದು ಖ್ಯಾತವಾಗಿದೆಯೆಂದರೆ ಅದಕ್ಕೆ ಕಾರಣ ಮತ್ತು ಆ ಯಶಸ್ಸಿನ ಹಿಂದಿರುವ ವ್ಯಕ್ತಿ ಪಾಲ್ ಫಯರ್ಮನ್.

ಬಹುಶಃ ನಿಮಗೆ ಯಾರಿಗೂ ಆತನ ಬಗ್ಗೆ ಹೆಚ್ಚಾಗಿ ತಿಳಿದಿರಲಿಕ್ಕಿಲ್ಲ. ಫಯರ್ಮನ್ ರಿಬಾಕ್ ಇಂಟರ್ನ್ಯಾಶನಲ್ ಕಂಪನಿಯ ಅಧ್ಯಕ್ಷನಾಗಿದ್ದವನು. ಆ ಸಮಯದಲ್ಲಿ ನೈಕ್ ಕಂಪನಿಯು ಈ ಕ್ರೀಡಾ ಪರಿಕರ ಉತ್ಪಾದನಾ ಕ್ಷೇತ್ರದಲ್ಲಿ ಪಾರುಪತ್ಯ ಮೆರೆದು ನಂಬರ್ ಒನ್ ಸ್ಥಾನದಲ್ಲಿತ್ತು. ರಿಬಾಕ್ ಅಷ್ಟೇನೂ ಹೆಸರಿರಲಿಲ್ಲ. ಆದರೆ ಪಾಲ್ ಫಯರ್ಮನ್ ಹೇಗಾದರೂ ಮಾಡಿ ತಮ್ಮ ರಿಬಾಕ್ ಕಂಪನಿಯ ಹೆಸರನ್ನು ಚಿರಸ್ಥಾಯಿಯಾಗಿಸಲು ಯೋಚಿಸಿದ. ತನ್ಮೂಲಕ ಕಾರ್ಯಪ್ರವೃತ್ತನಾದ.

ಆತ ತನ್ನ ಕೆಲಸಗಾರರಿಗೆ ವಿಶೇಷ ಕೊಡುಗೆ ಘೋಷಿಸಲಿಲ್ಲ. ತೀವ್ರ ತರವಾದ ಒತ್ತಡವನ್ನೂ ಹೇರಲಿಲ್ಲ. ಅಸಲಿಗೆ ನೌಕರರನ್ನು ಕೆಲಸಗಾರನೆಂದು ಪರಿಗಣಿಸಲೇ ಇಲ್ಲ. ಬದಲಿಗೆ ಸ್ನೇಹಿತನಂತೆ ಕಂಡ. ಎಲ್ಲರೂ ಒಟ್ಟು ಸೇರಿ ರಿಬಾಕ್ ಕಂಪನಿಯನ್ನು ನೈಕ್ ಕಂಪನಿ ಮೀರಿಸುವಂತೆ ಬೆಳೆಸಲು ಸಹಕರಿಸಬೇಕೆಂದು ಹುರಿದುಂಬಿಸಿದ. ಕಂಪನಿಯಲ್ಲಿದ್ದವರಿಗೆ ಅಗತ್ಯ ಸೌಕರ್ಯಗಳನ್ನೆಲ್ಲವನ್ನೂ ಒದಗಿಸಿದ. ತಾನೂ ಅವರೊಂದಿಗೆ ಬಾಸ್ ಇಸಂ ಬಿಟ್ಟು ದುಡಿದ, ರಿಸ್ಕ್ ತೆಗೆದುಕೊಂಡು ತನ್ನಂತೆ ಇತರರೂ ಕೆಲಸಮಾಡಲು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತೋರಿಸಿಕೊಟ್ಟ. ಗುರಿಯತ್ತ ತಲುಪುವುದ ಬಿಟ್ಟು ಬೇರೆ ಯಾವುದೇ ಯೋಚನೆ ಬರದಂತೆ, ಕೆಲಸವನ್ಬೂ ಖುಷಿಯಿಂದ ಮಾಡುವಂತೆ ಹೊಸ ಹೊಸ ವಿಧಾನ ಅನುಸರಿಸಿದ.

ಪರಿಣಾಮ ಏನಾಯ್ತಂದ್ರೆ ಹೆಸರೇ ಇಲ್ಲದ ರಿಬಾಕ್ ಕಂಪನಿಯನ್ನು ಪ್ರಪಂಚದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಂದು ನಿಲ್ಲಿಸಿದ. ಸತತ ಪ್ರಯತ್ನ, ತಾಳ್ಮೆ, ಮನವೊಲಿಕೆ ಮತ್ತು ಇದಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರೇರಣೆ ನೀಡಿದ್ದರಿಂದಲೇ ಈ ಸಾಧನೆ ಸಾಧ್ಯವಾಯಿತು.

ನಮಗೆ ಇಂದು ರಿಬಾಕ್ ಹೆಸರು ಗೊತ್ತು ಆದರೆ ಅದಕ್ಕೆ ದುಡಿದ ಹಲವು ಶಕ್ತಿಗಳು ಗೊತ್ತಿರದಿರಬಹುದು; ಆದರೆ ಆ ಶಕ್ತಿಯ ಹಿಂದಿನ ಪಾಲ್ ಫಯರ್ಮನ್ ಯಾಕೆ ಮಾದರಿಯಾಗಬಾರದು?

– ಲಗೋರಿಬಾಬಾ

LEAVE A REPLY

Please enter your comment!
Please enter your name here