ಶಿರಸಿ: 23-ಸೆ:
ಶಿರಸಿಯ ಲಯನ್ಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಶಾಂತಿ ಸಂದೇಶ ಬಿತ್ತಿಚಿತ್ರ ಸ್ಪರ್ದೆ ಲಯನ್ಸ್ ಸಭಾಭವನದಲ್ಲಿ ಅತ್ಯಂತ ಯಶಸ್ವೀಯಾಗಿ ನೆರವೇರಿತು. ಶಿರಸಿ ತಾಲೂಕಿನ ಹಲವು ಶಾಲೆಯ ಮಕ್ಕಳು ಉಪಸ್ಥಿತರಿದ್ದು ಸ್ಪರ್ದೆಯಲ್ಲಿ ಭಾಗವಹಿಸಿದ್ದರು.

ಈ ಸ್ಪರ್ದೆಯಲ್ಲಿ ವಿಜೇತರನ್ನು ಆಯ್ಕೆಮಾಡಲಾಯಿತು.
ಪ್ರಥಮ ಬಹುಮಾನ ಪಡೆದ ಕು. ಚಿತ್ರಾ ಜಿ. ಹೆಗಡೆ ಭೈರುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೈರುಂಬೆ
ದ್ವೀತೀಯ ಬಹುಮಾನ ಕು. ಗಗನ ಟಿ. ಶೆಟ್ಟಿ ಲಯನ್ಸ ಮಾದರಿ ಶಾಲೆ ಶಿರಸಿ
ತೃತೀಯ ಬಹುಮಾನ ಕು. ಕೇಶವ ಎನ್. ಗುಂಡು, ಸೇಂಟ್ ಅಂತೋನಿ ಶಾಲೆ ಶಿರಸಿ
ಇವರುಗಳು ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಆಯ್ದ 25 ಭಿತ್ತಿ ಪತ್ರಗಳನ್ನು ಮಲ್ಟಿಪಲ್ ಡಿಸ್ಟ್ರಿಕ್ಟ ಗೆ ಕಳುಹಿಸಿ, ಅಲ್ಲಿ ಆಯ್ಕೆಯಾದ ಭಿತ್ತಿ ಚಿತ್ರಗಳು ಅಂತರಾಷ್ಟ್ರೀಯ ಸಂಸ್ಥೆಗೆ ಕಳುಹಿಸಲಾಗುವುದು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಲಯನ್ಸ ಹಾಗೂ ಲಯನ್ಸ ಕ್ಲಬ್ಬಿನ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here