ಅಜಯ ಭಟ್ಟ ವರದಿ: ಪ್ರತೀ  ಭಾರತೀಯನೂ ಮೊಬೈಲ್ ಹಾಗೂ ಸೇವೆಗಳನ್ನು ಪಡೆಯಲಿ ಎಂಬ ಕಾರಣಕ್ಕೆ ಮುಖೇಶ ಅಂಬಾನಿ ನೇತ್ರತ್ವದ ರಿಲಯನ್ಸ ಜಿಯೋ ಸಂಪೂರ್ಣ ಉಚಿತವಾಗಿ ಮೊಬೈಲ್ ಹ್ಯಾಂಡಸೆಟ್ ನ್ನು ನೀಡುವುದಾಗಿ ಘೋಶಿಸಿದ್ದಾರೆ.
ಅನಿಯಮಿತ ಕರೆ ಹಾಗೂ ಅಂತರ್ಜಾಲ ಬಳಸುವ ಸೌಲಭ್ಯದೊಂದಿಗೆ ಈ ಮೊಬೈಲ್ ಗಳು ಲಭ್ಯವಾಗಲಿವೆ.
1500 ರೂಪಾಯಿ ಠೇವಣಿಯನ್ನು ತುಂಬಿ ಮೊಬೈಲ್ ನ್ನು ಹೊಂದಬಹುದಾಗಿದೆ. ಈ ಠೇವಣಿ ಮೂರು ವರ್ಷಗಳ ನಂತರ ನಿಮ್ಮ ಖಾತೆಗೆ ಜಮಾ ಆಗಲಿದೆ.
ಸಂಪೂರ್ಣ ಉಚಿತ ಮೊಬೈಲ್ ಭಾರೀ ಸಂಚಲನ ಮೂಡಿಸಲಿದ್ದು, ಮಾರುಕಟ್ಟೆಯಲ್ಲಿ ಭರ್ಜರಿ ಸಂಚಲನ ಮೂಡಿಸಿದೆ.

ಅಗಸ್ಟ 24 ರಿಂದ ಬುಕಿಂಗ್ ಸೌಲಭ್ಯ ದೊರೆಯಲಿದೆ.  2.4 ಇಂಚು ಪರದೆ ಹೊಂದಿದೆ. ಎಸ್.ಡಿ. ಕಾರ್ಡ ಬಳಸಬಹುದಾಗಿದ್ದು, 4G VoLTE  ಸೌಲಭ್ಯ ಹೊಂದಲಿದೆ.

Update:

ಪ್ರತೀ ತಿಂಗಳು ರೂ. 153 ಗೆ ಅನಿಯಮಿತ ಇಂಟರ್ನೆಟ್ ಸೌಲಭ್ಯ ದೊರೆಯಲಿದೆ. ಮೇಡ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸಿದ್ದಪಡಿಸಿದ ಮೊಬೈಲ್ ಮುಂಗಡ ಕಾಯ್ದಿರಿಸುವ ಮುಖಾಂತರ ಪಡೆಯಬಹುದಾಗಿದೆ. ಅಗಸ್ಟ 24 ರ ನಂತರ ಜೊಯೋ ವೆಬ್ಸೈಟ್, ಜಿಯೋ ಸ್ಟೋರ್ ಅಥವಾ ಜಿಯೋ ಮೊಬೈಲ್ ಆ್ಯಾಪ್ ಬಳಸಿ ಕಾಯ್ದಿರಿಸಬಹುದಾಗಿದೆ.

LEAVE A REPLY

Please enter your comment!
Please enter your name here