ಕಾರವಾರ: ಪಹರೆ ವೇದಿಕೆಯ ಚಿಂತನ ಮಂಥನ ವಿಭಾಗದಿಂದ ಎರಡನೇ ಕಾರ್ಯಕ್ರಮ ಇಂದು ಕಾರವಾರದ ಕನ್ನಡ ಭವನದಲ್ಲಿ ಜರುಗಿತು. ಈ ತಿಂಗಳ ವಿಷಯ ಕಾರವಾರದಲ್ಲಿ ಹೋಂಸ್ಟೇ ಸಾಧ್ಯತೆ ಎಂದು ಇದ್ದು ಈ ವಿಷಯದ ಮೇಲೆ ಕುಮಟಾದ ಪ್ರಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿರಾಜ್ ಕಡ್ಲೇ, ಹೋಂ ಸ್ಟೇ ಉದ್ಯಮಿ ಶ್ರೀ ರಾಜೀವ್ ಗಾಂವಕರ್ ಮತ್ತು ಚಿಂತಾಮಣಿ ಗೋಪಿ ಗೋಕರ್ಣ ಭಾಗವಹಿಸಿ ಮಾತನಾಡಿದರು.
ಕಾರವಾರದಲ್ಲಿ ಹೋಂಸ್ಟೇ ಗೆ ವಿಫುಲವಾದ ಸಾಧ್ಯತೆ ಇದ್ದು ಇಲ್ಲಿಯ ಪ್ರಕೃತಿಯ ವರದಾನವಾಗಿದೆ. ಹೋಂಸ್ಟೇಗೆ ಕಾನೂನಿನ ಹೆಚ್ಚು ಜಟಿಲತೆ ಇಲ್ಲ. ಹಳೆಯ ಮನೆಗಳಲ್ಲೂ ಸಹ ಆಧುನಿಕ ಸೌಲಭ್ಯ ಒದಗಿಸಿ ಹೋಂ ಸ್ಟೇ ಪ್ರಾರಂಭಿಸಬಹುದು. ಹೋಂಸ್ಟೇ ಗೆ ಸ್ವಚ್ಚತೆ ಅನ್ನುವುದು ಬಹಳ ಮುಖ್ಯವಾದ ವಿಚಾರ ಎಂಬ ಕುರಿತು ವಿವರವಾಗಿ ಮಾತನಾಡಿದರು.
ಹೋಂಸ್ಟೇ ಗೆ ಅವಶ್ಯಕವಾದ ವೆಬ್ ಸೈಟ್ ಹೋಂಸ್ಟೇ ಗಳಲ್ಲಿ ಇರುವ ವೈವಿದ್ಯತೆಗಳ ಬಗ್ಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ್ ನಾಯಕ ಸ್ವಾಗತಿಸಿದರೆ ಚಿಂತನ ಮಂಥನದ ಸಂಚಾಲಕ ಸುರೇಶ್ ಶೆಟ್ಟಿ ಸಭೆಯ ನಿರ್ಣಯಗಳನ್ನ ಒದಿ ಹೇಳಿದರು. ರಮೇಶ್ ಗುನಗಿ ವಂದಿಸಿದರು.
ತಿಂಗಳ ಸನ್ಮಾನ…
ಪಹರೆ ವೇದಿಕೆಯ ಚಿಂತನ ಮಂಥನ ವಿಭಾಗದಿಂದ ಆ ತಿಂಗಳ ಉಪನ್ಯಾಸ ವಿಷಯ ಸಂಭಂದಿಸಿದಂತೆ ಸಾಧನೆ ಮಾಡಿದ ವ್ಯಕ್ತಿಗೆ ಸನ್ಮಾನ ಕಾರ್ಯಕ್ರಮವನ್ನ ಇಟ್ಟುಕೊಂಡು ಬಂದಿದ್ದು ಈ ಬಾರಿ ಕಾರವಾರದ ದೇವಭಾಗ್ ದಲ್ಲಿ ಒಷಿಯನದ ಡೆಕ್ ಎಂಬ ಹೋಂಸ್ಟೇ ಆರಂಭಿಸಿ ಯಶಸ್ವಿಯಾದ ವಿನಯ ನಾಯ್ಕ್ ಎಂಬುವವರಿಗೆ ಸನ್ಮಾನ ಮಾಡಲಾಯಿತು. 
ಸನ್ಮಾನ ಸ್ವೀಕರಿಸಿದ ವಿನಯ್ ನಾಯ್ಕ್ ತಾನೋಬ್ಬ ಯಶಸ್ವಿ ಹೋಂಸ್ಟೇ ಉದ್ಯಮಿಯಾಗಿ ಹೇಗೆ ಬೆಳೆದೆ ಎಂಬುವುದನ್ನ ಜನರ ಮುಂದೆ ತೆರೆದಿಟ್ಟು ನನ್ನಂತೆ ಎಲ್ಲಾ ಯುವಕರು ಈ ಉದ್ಯಮದಲ್ಲಿ ತೊಡಗಿಸಿಕೊಳ್ಳ ಬಹುದು ಎಂದು ಸಲಹೆ ನೀಡಿದರು.
ಮುಂದಿನ ತಿಂಗಳ ಮೂರನೇ ಶನಿವಾರದಂದು ” ಸಮುದ್ರ ತೀರದಲ್ಲಿ ಉದ್ಯೋಗವಕಾಶಗಳು” ಎಂಬ ವಿಷಯದ ಮೇಲೆ ಚಿಂತನ ಮಂಥನ ನಡೆಯಲಿದೆ ಎಂದು ಚಿಂತನ ಮಂಥನ ಸಂಚಾಲಕರಾದ ಅಜಯ್ ಸಾಹುಕಾರ್ ತಿಳಿಸಿದ್ದಾರೆ..

LEAVE A REPLY

Please enter your comment!
Please enter your name here