ಉದ್ಯಮಿ ಉಪೇಂದ್ರ ಪೈ ಅಧ್ಯಕ್ಷತೆಯ ‘ಉಪೇಂದ್ರ ಪೈ ಸೇವಾ ಟ್ರಸ್ಟ್’ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಶಿರಸಿ ಸಿದ್ದಾಪುರ ತಾಲೂಕಿನ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಗರಿಷ್ಠ ಅಂಕ ಪಡೆದ ಅವಶ್ಯಕ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗೂ ಪ್ರಸಕ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು 24-06-2017 ಶನಿವಾರ ಬೆಳಿಗ್ಗೆ 9.30ಕ್ಕೆ ಶಿರಸಿಯ ಶ್ರೀ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದಾರೆ.

ಸುಮಾರು 643 ಅವಶ್ಯಕ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯುಲಿದ್ದಾರೆ ಹಾಗೂ ಸುಮಾರು 40 ಸಾವಿರಕ್ಕೂ ಹೆಚ್ಚು ನೋಟ್‍ಬುಕ್ ವಿತರಣೆ ಆಗಲಿದೆ. ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ ದತ್ತು ಪಡೆದಂತಹ ಬರೂರು ಸರಕಾರಿ ಶಾಲೆ ನಂಬರ್ 2 ಕನ್ನಡ ಶಾಲೆಗೆ ಡೆಸ್ಕ ಹಾಗೂ ಖುರ್ಚಿಯನ್ನು ವಿತರಣೆ ಇದೆ. ಪ್ರತಿಭಾ ಪುರಸ್ಕಾರದ ಅಂಗವಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ಶಿರಸಿಯ ಮಹೇಶ ಶಾಸ್ತ್ರಿ ಹಾಗೂ ಪ್ರತೀಕಾ ಭಟ್ಟ ಅವರಿಗೆ ಮತ್ತು ಆರೋಗ್ಯ ಸಮಸ್ಯೆ ಇದ್ದರೂ ಕಷ್ಟಪಟ್ಟು ಓದಿ ಮಾದರಿ ಎನಿಸಿಕೊಂಡ ಪೂಜಾ ಹೆಗಡೆಗೆ ಪುರಸ್ಕಾರವಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಗಾರಮಕ್ಕಿಯ ಪ.ಪೂ.ಶ್ರೀ ಮಾರುತಿ ಗುರೂಜಿ ನಡೆಸಿಕೊಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪೇಂದ್ರ ಪೈ ವಹಿಸಲಿದ್ದಾರೆ. ವಿಶೇಷ ಸಾಧನೆ ಮಾಡಿದ ಪದ್ಮಶ್ರೀ ವಿಜೇತ ಸುಕ್ರೀ ಗೌಡ, ಪದ್ಮಶ್ರೀ ವಿಜೇತ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಮಾಜಿಕ ಮುಂದಾಳು, ಸಹಕಾರೀ ಧುರಿಣ ಡಾ. ವಿ.ಎಸ್.ಸೋಂದೆ, ಭಾಸ್ಕರ ಸ್ವಾದಿ ಚ್ಯಾರಿಟೇಬಲ್ ಟ್ರಸ್ಟ್‍ನ ಉದಯ ಸ್ವಾದಿ ಹಾಗೂ ಉದ್ಯಮಿಗಳಾದ ಅಬ್ದುಲ್ ಖುದ್ದೂಸ್ ಹಸನ ಸಾಬ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ವಿಶೇಷ ಆಹ್ವಾನಿತರಾಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಕಲ್ಪ ಸೇವಾ ಸಂಸ್ಥೆಯ ಪ್ರಮೋದ ಹೆಗಡೆ, ಜೆಡಿ.ಎಸ್. ಮುಖಂಡರಾದ ಶಶಿಭೂಷಣ ಹೆಗಡೆ, ರಾಜೇಶ್ವರಿ ಹೆಗಡೆ, ದೀಪಕ ಹೊನ್ನಾವರ ಅಭಿಮಾನಿ ಬಳಗದ ಸೂರ್ಯಪ್ರಕಾಶ ಹೊನ್ನಾವರ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಕ್ಷ್ಮಣ ಎಂ, ಕಾಂಗ್ರೇಸ್ ಜಿಲ್ಲಾ ಯುವ ನಾಯಕ ಸಂತೋಷ ಶೆಟ್ಟಿ, ಶಿರಸಿ ಗ್ರಾಮ ಒಕ್ಕಲಿಗ ಸಂಘದ ಅಧ್ಯಕ್ಷರಾದ ಗೋಪಾಲ ಪಟಗಾರ, ಶ್ರೀ ಕೋಟೆ ಆಚಿಜನೇಯ ದೇವಸ್ಥಾನದ ಅಧ್ಯಕ್ಷರಾದ ವಿ.ಎನ್.ನಾಯ್ಕ, ಧುರೀಣರಾದ ವಸಂತ ನಾಯ್ಕ, ಬಿ.ಆರ್.ನಾಯ್ಕ ಹಾಗೂ ಮಡಿವಾಳ ಸಂಘದ ಅಧ್ಯಕ್ಷರಾದ ಐ. ಈ. ಗಿಡ್ಡನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಉಪೇಂದ್ರ ಪೈ ತಿಳಿಸಿದರು.

LEAVE A REPLY

Please enter your comment!
Please enter your name here