ಕಳೆದ ಶನಿವಾರ ಕಾರವಾರ ಸಮುದ್ರ ತೀರದಲ್ಲಿ ಚಾಪೆಲ್ ವಾರ್ ಶಿಪ್ ಮ್ಯೂಸಿಯಂ ಬಳಿ ನಸುಕಿನಲ್ಲಿ ಅನ್ಯಗ್ರಹ ಜೀವಿಗಳು ಸುತ್ತಾಡುತ್ತಿದ್ದವು. ಬೆಳಿಗ್ಗೆ ೬.೩೦ ರ ಸುಮಾರಿಗೆ ಜೋರಾಗಿ ಮಳೆ ಬೀಳುತ್ತಿತ್ತು. ಅದರ ಜೊತೆಗೆ ಮೋಡ ಕವಿದು ಇನ್ನೂ ಕತ್ತಲೆಯ ವಾತಾವರಣವೇ ಇತ್ತು. ಅಂತಹ ಸಂಧರ್ಭದಲ್ಲಿ ವಾಯು ವಿಹಾರಕ್ಕೆ ಬಂದ ಕೆಲ ಜನ ಕುತೂಹಲದಿಂದ ಸಮೀಪ ಹೋಗಿ ನೋಡಿದರೆ ಅನ್ಯಗ್ರಹ ಜೀವಿಗಳಾಗದೇ ಸ್ವಚ್ಚತೆಯಲ್ಲಿ ತೊಡಗಿದ್ದ ಪಹರೆ ವೇದಿಕೆಯ ಕಾರ್ಯಕರ್ತರಾಗಿದ್ದರು.

ಶನಿವಾರ ಕುಂಭದ್ರೋಣ ಮಳೆ ಸುರಿಯುತ್ತಿದ್ದರೂ ಸಹ ಸ್ವಚ್ಚತೆಯ ಪ್ರತಿಜ್ಞೆ ತೊಟ್ಟಿರುವ ಪಹರೆ ವೇದಿಕೆ ಸದಸ್ಯರು ರೈನ್ ಕೋಟನ್ನ ತೊಟ್ಟಿದ್ದರಿಂದ ನಸುಕಿನಲ್ಲಿ ಅನ್ಯಗ್ರಹ ಜೀವಿಗಳಂತೆವ ಕಾಣುವ ಮೂಲಕ  ಚಾಪೆಲ್ ಯುದ್ದ ನೌಕೆಯ ಸುತ್ತಮುತ್ತ ಬಿದ್ದ ಕಸಗಳನ್ನ ಆರಿಸುತ್ತಿದ್ದರು. ಮಳೆಯಲ್ಲಿ ಹಾಯಾಗಿ ಮಲಗಬೇಕಾದ ಸಂಧರ್ಭದಲ್ಲಿ ಪಹರೆಯ ಕಾರ್ಯಕರ್ತರ ಸ್ವಚ್ಚತಾ ಕಾರ್ಯ ವಾಯು ವಿಹಾರಕ್ಕೆ ಬಂದವರ ಮೆಚ್ಚುಗೆಗೆ ಪಾತ್ರವಾಗಿದ್ದು ಸತ್ಯ.

ಕಳೆದ ಎರಡುವರೆ ವರ್ಷಗಳಿಂದ ಸ್ವಚ್ಚತೆಯಲ್ಲಿ ತೊಡಗಿರುವ ಪಹರೆ ವೇದಿಕೆಯವರು ಕಾರವಾರವನ್ನು ಸ್ವಚ್ಚ ನಗರವನ್ನಾಗಿಸಿಯೇ ಸಿದ್ದ ಎಂಬ ಹಠಕ್ಕೆ ಬಿದ್ದಂತಿದೆ.

– ನಾಗರಾಜ ನಾಯ್ಕ

LEAVE A REPLY

Please enter your comment!
Please enter your name here