Ajay Bhat
Ajay Bhat

ಒಂದು ವರದಿಯ ಪ್ರಕಾರ ಭಾರತೀಯರು ಅಂತರ್ಜಾಲ ಬಳಕೆಯನ್ನು ಅನಗತ್ಯ ಕಾರಣಗಳಿಗಾಗಿ ಅತ್ಯಧಿಕವಾಗಿ ಬಳಸುತ್ತಲಿದ್ದಾರಂತೆ. ೪೭ ಪ್ರತಿಶತಃ ಸುಖಾಸುಮ್ಮನೆ ಅಂತರ್ಜಾಲ ಬಳಸಿ ತಮ್ಮ ಅತ್ಯಧಿಕ ಸಮಯ ವ್ಯರ್ಥಗೊಳಿಸುತ್ತಲಿದ್ದಾರಂತೆ. ಇದ್ದಿರಬಹುದು ಬಿಡಿ, ನಾನೇ ಗಮನಿಸಿದಂತೆ ಹೆಚ್ಚಿನವರು ಫೇಸ್‌ಬುಕ್ ತೆರೆದು ಬೆಳಗಿನಿಂದ ಸಾಯಂಕಾಲದವರೆ ಕಾಲಹರಣ ಮಾಡುತ್ತಲಿರುತ್ತಾರೆ. ಬೇಕೋ ಬೇಡವೋ ಕ್ಷಣಕ್ಷಣಕ್ಕೊಮ್ಮೆ ಫೆಸ್‌ಬುಕ್, ವಾಟ್ಸ್‌ಆಪ್, ಸ್ಕೈಪ್ ಇತ್ಯಾದಿಗಳನ್ನು ತೆರೆದು ನೋಡುತ್ತಲಿರುತ್ತಾರೆ.
ಸ್ಮಾರ್ಟ್‌ಫೋನ್ ಮುಖಾಂತರ ಸಂವಹನದಲ್ಲಿ ಪ್ರಬಲ ಚಟುವಟಿಕೆ ಮುಂದುವರಿದಿದೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಸದಾ ಜಾಗ್ರತಗೊಂಡಿರುವದರಿಂದ ಇಂಟರ್‌ನೆಟ್ ದೊರೆತ ತಕ್ಷಣ ಮೊಬೈಲ್‌ಗಳು ಸೂಚನೆಗಳನ್ನು ತಿಳಿಸತೊಡಗುತ್ತವೆ. ಇದು ಮೊಬೈಲ್ ಬಳಕೆಯನ್ನು ಹಾಗೂ ಅದರ ಮುಖಾಂತರ ಅಂತರ್ಜಾಲ ಬಳಕೆಯನ್ನು ಅತ್ಯಧಿಕಗೊಳಿಸಿ ಜನರನ್ನು ಪದೇ ಪದೇ ಮೊಬೈಲ್ ಬಳಸುವಂತೆ ಪ್ರಚೋಧಿಸುತ್ತಿವೆ ಎಂದು ಸ್ವೀಡೆನ್ ಟೆಲಿಕೊಂ ಇಕ್ವಿಪ್‌ಮೆಂಟ್ ತಯಾರಕ ಎರಿಕ್‌ಸನ್ ಕಂಪನಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈಗಿನ ಎಲ್ಲ ಆಪ್‌ಗಳನ್ನು ಕೂಲಂಕೂಶವಾಗಿ ವಿಶ್ಲೇಷಿಸಿರುವ ವರದಿ ಈ ಸಂವಹನ ಸಾಧನ ಬಳಕೆದಾರರನ್ನು ಅದರಲ್ಲೂ ಯುವ ಜನರನ್ನು ತನ್ನ ವ್ಯಸನಿಗಳನ್ನಾಗಿಸಿದೆ, ಅದು ಎಷ್ಟರ ಮಟ್ಟಿಗೆ ಎಂದರೆ ಒಂದು ಕ್ಷಣವೂ ಮೊಬೈಲ್‌ನಲ್ಲಿರುವ ಫೆಸ್‌ಬುಕ್, ವಾಟ್ಸ್‌ಆಪ್, ಸ್ಕೈಪ್ ಇತ್ಯಾದಿ ಆಪ್‌ಗಳನ್ನು ಅತ್ಯಧಿಕವಾಗಿ ಬಳಸುತ್ತಲಿದ್ದಾರೆ. ಇದರ ಅರ್ಥ ಕೇವಲ ಭಾರತೀಯರಷ್ಟೇ ಅತ್ಯಧಿಕವಾಗಿ ಬಳಸುತ್ತಲಿದ್ದಾರೆ ಎಂಬುದಲ್ಲ. ಭಾರತೀಯರ ಬಳಕೆ ಹೆಚ್ಚುತ್ತಲಿದೆ ಅದೂ ಅನಗತ್ಯವಾಗಿ ಎಂಬುದು ಈ ವರದಿಯ ಅಂಬೋಣ.
ಬಳಸಿದರೆ ಬಳಸಲಿ ಬಿಡಿ ಅದರಿಂದೇನು ಸಮಸ್ಯೆ ಎನ್ನುತ್ತಲಿದ್ದೀರಾ? ಇಲ್ಲ ಖಂಡಿತವಾಗಿಯೂ ಇದೊಂದು ದೊಡ್ಡ ಸಮಸ್ಯೆಗೆ ಮುನ್ನುಡಿಯೇ ಸರಿ. ಅದು ಹೇಗೆ? ಈ ಪ್ರಶ್ನೆಗೆ ನಾನು ನೀಡುವ ಕಾರಣವೊಂದೆ ಅಂತಿಮವಲ್ಲ ಇದು ಕೇವಲ ಉದಾಹರಣೆ ಮಾತ್ರ.
ಉಪಯುಕ್ತವಾಗಿ ಬಳಸಿದರೆ ಯಾವುದೇ ಸಮಸ್ಯೆ ಇಲ್ಲ. ಅನಗತ್ಯವಾಗಿ ಬೆಳಗಿನಿಂದ ಫೆಸ್‌ಬುಕ್ ತೆರೆದು ಕುಳಿತುಕೊಳ್ಳುವುದು, ಸಂಬಂಧವೇ ಇಲ್ಲದ ತಮ್ಮ ವ್ಯಕ್ತಿತ್ವಕ್ಕೆ ವ್ಯತಿರೀಕ್ತವಾದ ವಿಷಯ ಹಂಚಿಕೊಳ್ಳುವುದು, ಉಚಿತ ಎನ್ನುವ ಕಾರಣಕ್ಕೆ ಮಾಡಲು ಕೆಲಸವಿಲ್ಲದವರಂತೆ ಕಂಡಕಂಡವರಿಗೆಲ್ಲ ಹೈ ಎಂದು ಮೆಸೇಜ್ ಕಳಿಸುವುದು, ಯಾರೋ ಕಷ್ಟಪಟ್ಟು ಬರೆದ ಚಿತ್ರ, ಕವನ, ಕವಿತೆ, ಕಥೆ, ಲೇಖನ ಇತ್ಯಾದಿಗಳನ್ನು ತಾವೇ ಬರೆದಿದ್ದೇವೆ ಎನ್ನುವಂತೆ ಎಲ್ಲರೊಂದಿಗೂ ಹಂಚಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಇತ್ಯಾದಿ ಇಂದಿನ ದಿನಗಳಲ್ಲಿ ಅತೀಯಾಗಿದೆ. ಇವುಗಳಿಂದ ಸಮಾಜಕ್ಕೆ ಯಾವುದೇ ಪ್ರಕಾರದ ಉಪಯೋಗವಾಗದೇ ಅನಗತ್ಯ ಕಿರಿಕಿರಿ ಹೆಚ್ಚಿಸುತ್ತದೆ.
ಈ ಲೇಖನದ ಅರ್ಥ ೪೭ ಪ್ರತಿಶತಃ ಜನರು ಅನಗತ್ಯವಾಗಿ ಫೆಸ್‌ಬುಕ್ ಇತ್ಯಾದಿಗಳನ್ನು ಬಳಸುತ್ತಲಿದ್ದಾರೆ ಎಂಬರ್ಥವಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಅನಗತ್ಯ ಬಳಕೆ ಹೆಚ್ಚುತ್ತಲಿದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡಲಿದೆ ಎಂಬುದು ಈ ವರದಿಯ ಅಂಬೋಣ.
ವರದಿ ಎನೇ ಇರಲಿ, ಅನಗತ್ಯವಾಗಿ ಅಂತರ್ಜಾಲ ತೆರೆದು ಕುಳ್ಳುವುದು ಯಾವದೇ ಪ್ರಕಾರವಾಗಿಯೂ ಉತ್ತಮ ಬೆಳವಣಿಗೆಯಲ್ಲ. ಅಂತರ್ಜಾಲದಲ್ಲಿ ಅತ್ಯುತ್ತಮ ವಿಷಯಗಳು ಒಳಗೊಂಡಿದ್ದು, ಉಪಯುಕ್ತವಾಗಿ ಬಳಸಿದಲ್ಲಿ ಇದು ಖಂಡಿತವಾಗಿಯೂ ಉತ್ತಮ ಸಮಾಜ ನಿರ್ಮಾಣಮಾಡುವಲ್ಲಿ ಯಾವುದೇ ಸಂದೇಹವಿಲ್ಲ.

LEAVE A REPLY

Please enter your comment!
Please enter your name here